ಆರ್ಟಿಕಲ್‌ 370 ರದ್ದು ಎತ್ತಿಹಿಡಿದ ಸುಪ್ರೀಂ ಕೋರ್ಟ್‌! ಮೋದಿ ಫುಲ್‌ ಖುಷ್‌!

masthmagaa.com:

ಆರ್ಟಿಕಲ್‌ 370 ಅಡಿಯಲ್ಲಿ ಜಮ್ಮು & ಕಾಶ್ಮೀರಕ್ಕೆ ನೀಡಲಾದ ವಿಶೇಷ ಸ್ಥಾನಮಾನಗಳನ್ನ ರದ್ದು ಮಾಡೋಕೆ 4 ವರ್ಷಗಳ ಹಿಂದೆ ಬಿಜೆಪಿ ಸರ್ಕಾರ ನಿರ್ಧಾರ ಮಾಡಿತ್ತು. ಕೊನೆಗೂ ಸಾಕಷ್ಟು ವಿಚಾರಣೆಗಳ ನಂತರ ಕೇಂದ್ರ ಸರ್ಕಾರದ ನಿರ್ಧಾರವನ್ನ ಸುಪ್ರೀಂ ಕೋರ್ಟ್‌ ಎತ್ತಿಹಿಡಿದಿದೆ. ಆರ್ಟಿಕಲ್‌ 370 ರದ್ದು ಮಾಡೋ ಪರ ಸುಪ್ರೀಂ ಕೋರ್ಟ್‌ ಅವಿರೋಧ ತೀರ್ಪು ನೀಡಿದೆ. ಅಂದ್ಹಾಗೆ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್‌ ಅವ್ರ ನೇತೃತ್ವದ ಪಂಚಸದಸ್ಯ ಸಾಂವಿಧಾನಿಕ ಪೀಠ ಈ ಐತಿಹಾಸಿಕ ತೀರ್ಪು ನೀಡಿದೆ. ಈ ವೇಳೆ ಸೆಪ್ಟೆಂಬರ್‌ 2024ರ ಒಳಗಾಗಿ ಜಮ್ಮು & ಕಾಶ್ಮೀರದಲ್ಲಿ ಚುನಾವಣೆ ನಡೀಬೇಕು. ಜೊತೆಗೆ ಜಮ್ಮು & ಕಾಶ್ಮೀರಕ್ಕೆ ಅದಕ್ಕೆ ನೀಡಬೇಕಾದ ರಾಜ್ಯ ಸ್ಥಾನಮಾನಗಳನ್ನ ಆದಷ್ಟು ಬೇಗ ಹಿಂದಿರುಗಿಸಬೇಕು ಅಂತ ಹೇಳಿದೆ. ಇನ್ನು ಸುಪ್ರೀಂ ಕೋರ್ಟ್‌ ತೀರ್ಪಿನ ಬಗ್ಗೆ ಸಂತಸ ವ್ಯಕ್ತಪಡಿಸಿದ ಪ್ರಧಾನಿ ನರೇಂದ್ರ ಮೋದಿಯವ್ರು, ʻಇವತ್ತು ಸುಪ್ರೀಂ ಕೋರ್ಟ್‌ ನೀಡಿರೋ ಆದೇಶ ಐತಿಹಾಸಿಕವಾಗಿದೆ. ಈ ತೀರ್ಪು ಕೇವಲ ತೀರ್ಪಲ್ಲ. ಇದು ಭರವಸೆಯ ದಾರಿದೀಪವಾಗಿದೆ ಅಂತ ತಮ್ಮ `X’ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಜೊತೆಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಕೂಡ ʻಆರ್ಟಿಕಲ್‌ 370 ರದ್ದು ಮಾಡೋ ನಿರ್ಧಾರ ಸಂಪೂರ್ಣ ಸಾಂವಿಧಾನಿಕವಾಗಿದೆ ಅಂತ ಇವತ್ತು ಸುಪ್ರೀಂ ಕೋರ್ಟ್‌ನ ತೀರ್ಪು ಪ್ರೂವ್‌ ಮಾಡಿದೆʼ ಅಂತ ಹೇಳಿದ್ದಾರೆ.

ಈ ಎಲ್ಲದ್ರ ನಡುವೆ ಇದೀಗ PDP ಮುಖ್ಯಸ್ಥೆ ಮೆಹಬೂಬ್‌ ಮುಫ್ತಿ ಮತ್ತು ನ್ಯಾಷನಲ್‌ ಕಾನ್ಫರೆನ್ಸ್‌ನ ನಾಯಕ ಒಮರ್‌ ಅಬ್ದುಲ್ಲಾ, ʻಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು ನೀಡ್ತಿರೋ ವೇಳೆ ನಮ್ಮನ್ನ ಮನೆಯೊಳಗೆ ಕೂಡಿ ಹಾಕಿದ್ರುʼ ಅಂತ ಆರೋಪಿಸಿದ್ದಾರೆ. ತೀರ್ಪು ನೀಡೋಕು ಮುಂಚೆ ಪೊಲೀಸ್‌ ಮುಫ್ತಿಯವ್ರ ಮನೆಯ ಬಾಗಿಲನ್ನ ಸೀಲ್‌ ಮಾಡಿದ್ರು ಅಂತ PDP ತನ್ನ `X’ ಖಾತೆಯಲ್ಲಿ ಫೋಟೋಸ್‌ ಶೇರ್‌ ಮಾಡಿ ಬರೆದುಕೊಂಡಿದೆ. ಈ ಬಗ್ಗೆ ರಿಯಾಕ್ಟ್‌ ಮಾಡಿರೋ ಜಮ್ಮು & ಕಾಶ್ಮೀರದ ಲೆಫ್ಟಿನೆಂಟ್‌ ಗವರ್ನರ್‌ ಮನೋಜ್‌ ಸಿನ್ಹಾ ಈ ಆರೋಪಗಳನ್ನ ಸುಳ್ಳು ಅಂತ ಹೇಳಿದ್ದಾರೆ. ʻಇವ್ರು ಮಾಡಿರೋ ಆರೋಪ ಬೇಸ್‌ಲೆಸ್‌ ಆಗಿದೆ ಇದಕ್ಕೆ ಯಾವ್ದೇ ಆಧಾರವಿಲ್ಲ. ರಾಜಕೀಯ ಕಾರಣಕ್ಕೆ ಯಾರನ್ನೂ ಕೂಡ ಮನೆ ಒಳಗೆ ಕೂಡಿ ಹಾಕಿಲ್ಲ. ಇವೆಲ್ಲಾ ಬರೀ ರೂಮರ್ಸ್‌ ಅಷ್ಟೇʼ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply