ʻಬಾಪ್‌ ಆಫ್‌ ಚಾರ್ಟ್‌ʼ ಹೆಸರಿನ ಸ್ಟಾಕ್ ಮಾರ್ಕೆಟ್‌ ವಂಚಕ ಬ್ಯಾನ್!‌ ಎಚ್ಚರ.. ಎಚ್ಚರ…!

masthmagaa.com:

ʻಬಾಪ್‌ ಆಫ್‌ ಚಾರ್ಟ್‌ʼ ಹೆಸರಿನಲ್ಲಿ ಸ್ಟಾಕ್‌ ಮಾರ್ಕೆಟ್‌ ಎಕ್ಸ್‌ಪರ್ಟ್‌ ಅಂತ ಹೇಳ್ಕೊಂಡು ಕೋಟಿ ಕೋಟಿ ಹಣ ನುಂಗಿದ್ದ ವ್ಯಕ್ತಿಯೊಬ್ಬನ್ನ SEBI (ಸೆಕ್ಯುರಿಟೀಸ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ) ಬ್ಯಾನ್‌ ಮಾಡಿದೆ. ಈತನ ನಿಜವಾದ ಹೆಸರು ಮೊಹಮದ್‌ ನಾಸಿರುದ್ಧಿನ್‌ ಷಾ. ಸಾಮಾಜಿಕ ಜಾಲತಾಣ X ನಲ್ಲಿ ಬಾಪ್‌ ಆಫ್‌ ಚಾರ್ಟ್‌ ಹೆಸರಿನಲ್ಲಿ ಸ್ಟಾಕ್‌ ಮಾರ್ಕೆಟ್‌ಗೆ ಸಂಬಂಧಿಸಿದ ಎಜುಕೇಶನಲ್ ಕೋರ್ಸ್‌ಗಳನ್ನ ಪ್ರಾರಂಭಿಸಿ, ಸ್ಟಾಕ್‌ಗಳನ್ನ ಕೊಳ್ಳುವ, ಮಾರುವ ರೆಕಮೆಂಡೇಶನ್‌ಗಳನ್ನ ಮಾಡುತ್ತಾ, ಜನರಿಂದ ಹಣ ಗಳಿಸುತ್ತಿದ್ದ ಅಂತ ಸೆಬಿ ಹೇಳಿದೆ. ಅಲ್ಲದೆ ಈ ರೀತಿ ಕಾನೂನುಬಾಹಿರವಾಗಿ ಲಾಭ ಗಳಿಸಿ ಸೆಬಿಗೆ ವಂಚಿಸಿರೋದಕ್ಕಾಗಿ 17.20 ಕೋಟಿ ರೂಪಾಯಿ ದಂಡ ಕಟ್ಟಲು ಹೇಳಿದೆ.

-masthmagaa.com

Contact Us for Advertisement

Leave a Reply