ಜೈಶಂಕರ್‌ ಹೊಗಳಿದ ರಷ್ಯಾ! ವಿಶ್ವಸಂಸ್ಥೆಯ ಭಾಷಣ ಮೆಲುಕು!

masthmagaa.com:

‌ಭಾರತದ ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಅವ್ರನ್ನ ರಷ್ಯಾ ಹಾಡಿ ಹೊಗಳಿದೆ. ರಷ್ಯಾದಿಂದ ತೈಲ ಖರೀದಿಸ್ತಿರೋ ವಿಚಾರವಾಗಿ ಪಾಶ್ಚಿಮಾತ್ಯ ದೇಶಗಳಿಗೆ ಜೈಶಂಕರ್‌ ತಕ್ಕ ಉತ್ತರ ನೀಡಿದ್ದಾರೆ ಅಂತ ರಷ್ಯಾದ ವಿದೇಶಾಂಗ ಸಚಿವ ಸರ್ಗೇ ಲಾವ್ರೋ ಹೇಳಿದ್ದಾರೆ. ರಷ್ಯಾದಲ್ಲಿ ನಡೆದ ಸಭೆಯೊಂದನ್ನ ಉದ್ದೇಶಿಸಿ ಮಾತನಾಡಿದ ಅವ್ರು, ʻನನ್ನ ಗೆಳೆಯ, ವಿದೇಶಾಂಗ ಸಚಿವ ಸುಬ್ರಹ್ಮಣ್ಯಂ ಜೈಶಂಕರ್‌ ಒಮ್ಮೆ ವಿಶ್ವಸಂಸ್ಥೆಯಲ್ಲಿ ಮಾತಾಡ್ತಿದ್ರು. ಆಗ ಅವ್ರಿಗೆ, ರಷ್ಯಾದಿಂದ ಯಾಕಿಷ್ಟು ಆಯಿಲ್‌ ಖರೀದಿ ಮಾಡ್ತಿದ್ದೀರಿ ಅಂತ ಪ್ರಶ್ನಿಸಲಾಯ್ತು. ಅದಕ್ಕೆ ಉತ್ತರಿಸಿದ ಜೈಶಂಕರ್‌ ಪಾಶ್ಚಿಮಾತ್ಯ ದೇಶಗಳನ್ನ ಕುರಿತು ನಿಮ್ಮದನ್ನ ನೀವು ನೋಡ್ಕೊಳ್ಳಿ ಅಂತ ಅಡ್ವೈಸ್‌ ಮಾಡಿದ್ರು. ಅಲ್ದೇ ರಷ್ಯಾದಿಂದ ಪಾಶ್ಚಿಮಾತ್ಯ ದೇಶಗಳು ಅದೆಷ್ಟು ಆಯಿಲ್‌ನ್ನ ಖರೀದಿಸ್ತಿವೆ ಅನ್ನೋ ಬಗ್ಗೆನೂ ವಿವರಿಸಿ ಹೇಳಿದ್ರು. ನ್ಯಾಷನಲ್‌ ಡಿಗ್ನಿಟಿ ಅಂದ್ರೆ ಇದುʼ ಅಂತ ಜೈಶಂಕರ್‌ ಅವರ ನಿಲವನ್ನ ರಷ್ಯಾ ವಿದೇಶಾಂಗ ಸಚಿವರು ಗುಣಗಾನ ಮಾಡಿದ್ದಾರೆ..ಇದೇ ವೇಳೆ ಸೆರ್ಗೆ ಲಾವ್ರೊವ್‌ ಅವ್ರು ಭಾರತ-ರಷ್ಯಾ ನಡುವಿನ ಡೆಫೆನ್ಸ್‌ ರಿಲೇಷನ್‌ ಬಗ್ಗೆ ಮಾತನಾಡಿದ್ದಾರೆ. ʻʻಭಾರತ ನಮ್ಮ ಹಳೆಯ ಸ್ನೇಹಿತ…ಹಲವು ವರ್ಷಗಳ ಹಿಂದೆ ಈ ಪಾಶ್ಚಿಮಾತ್ಯ ರಾಷ್ಟ್ರಗಳು ಭಾರತಕ್ಕೆ ಆಧುನಿಕ ಶಸ್ತ್ರಾಸ್ತ್ರಗಳನ್ನ ರವಾನಿಸಿ ಸಹಾಯ ಮಾಡೋ ಬಗ್ಗೆ ಸ್ವಲ್ಪಾನೂ ಥಿಂಕ್‌ ಮಾಡೇ ಇಲ್ಲ. ಆದ್ರೆ ಆವಾಗ ಕೇವಲ ರಷ್ಯಾ ಮಾತ್ರ ಭಾರತದ ಸಹಾಯಕ್ಕೆ ನಿಂತಿತ್ತು. ಆಧುನಿಕ ಆಯುಧಗಳನ್ನ ಭಾರತಕ್ಕೆ ಕಳುಸಿತ್ತು. ಅಷ್ಟೇ ಅಲ್ದೇ ಉಭಯ ದೇಶಗಳು ಒಟ್ಟಾಗಿ ರಕ್ಷಣಾ ಕ್ಷೇತ್ರದಲ್ಲಿ ಜಂಟಿ ಉತ್ಪಾದನೆ ಕೂಡ ಸ್ಟಾರ್ಟ್‌ ಮಾಡ್ತು. ಬ್ರಹ್ಮೋಸ್‌ಗಳಂತಹ (BrahMos) ಹೈ ಟೆಕ್‌ ಮಿಸೈಲ್‌ಗಳನ್ನ ಕೂಡ ಉತ್ಪಾದಿಸಿದೆ. ಈ ಕಾರಣದಿಂದಲೇ ನಾವು ನಮ್ಮ ಫ್ರೆಂಡ್‌ಶಿಪ್‌ನ್ನ ಸದಾ ನೆನಪಿಸ್ಕೊಳ್ತೇವೆ…ಎಂದಿಗೂ ಮರೆಯೋಕೆ ಸಾಧ್ಯವಿಲ್ಲ. ಭಾರತೀಯರು ಕೂಡ ಈ ಫ್ರೆಂಡ್‌ಶಿಪ್‌ ಮರೆಯಲ್ಲ ಅಂತ ನಾವು ಭಾವಿಸ್ತೇವೆ’ ಅಂತ ಹೇಳಿದ್ದಾರೆ. ಅಂದ್ಹಾಗೆ ಇತ್ತೀಚೆಗೆ ಜರ್ಮನಿಯಲ್ಲಿ ನಡೆದ ಮ್ಯೂನಿಚ್‌ ಸೆಕ್ಯುರಿಟಿ ಕಾನ್ಫರೆನ್ಸ್‌ ವೇಳೆ ನಡೆದ ಇಂಟರ್‌ವ್ಯೂ ಒಂದ್ರಲ್ಲಿ ಭಾರತ ಕೂಡ ರಷ್ಯಾ ಜೊತೆಗಿನ ಸಂಬಂಧದ ಬಗ್ಗೆ ಹೇಳ್ಕೊಂಡಿತ್ತು. ʻವಸ್ಟರ್ನ್‌ ಕಂಟ್ರೀಸ್‌ ರಷ್ಯಾವನ್ನ ದ್ವೇಷಿಸುತ್ತೆ ಅಂತ ಭಾರತ ಹಾಗೇ ಮಾಡೋಕಾಗಲ್ಲ. ನಿಮ್ಮ ನಿಲುವು ನಿಮಗೆ…ನಮ್ಮ ನಿಲುವು ನಮಗೆʼ ಅಂತ ಯುರೋಪ್‌ ರಾಷ್ಟ್ರಗಳ ವಿರುದ್ಧ ಜೈಶಂಕರ್‌ ಕಿಡಿಕಾರಿದ್ರು.

-masthmagaa.com

Contact Us for Advertisement

Leave a Reply