ಶಿವಮೊಗ್ಗ: ಗೋಡೆಗಳ ಮೇಲೆ ವಿವಾದಾತ್ಮಕ ಬರಹಗಳನ್ನ ಬರೆದ ಕಿಡಿಗೇಡಿಗಳು

masthmagaa.com:

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಶಿರಾಳಕೊಪ್ಪದಲ್ಲಿ ಗೋಡೆ ಮೇಲೆ ವಿವಾದಿತ ಬರಹಗಳನ್ನ ಬರೆಯಲಾಗಿದೆ. 8 ರಿಂದ 9 ಕಡೆಗಳಲ್ಲಿ ಕೆಂಪು ಹಾಗೂ ನೀಲಿ ಬಣ್ಣದ ಸ್ಪ್ರೇ ಪೇಂಟ್‌ಗಳಿಂದ ಜಾಯಿನ್‌ ಸಿಎಫ್‌ಐ ಅಂತ ಬರೆಯಲಾಗಿದೆ. ಸರ್ಕಾರ ಈಗಾಗಲೇ ಪಿಎಫ್‌ಐ ಹಾಗೂ ಅದರ ಅಂಗ ಸಂಸ್ಥೆಗಳನ್ನ 5 ವರ್ಷಗಳ ಕಾಲ ನಿಷೇಧ ಮಾಡಿದೆ. ಆದರೂ ಕಿಡಿಗೇಡಿಗಳು ಈ ರೀತಿ ಗೋಡೆಗಳ ಮೇಲೆ ಬರಹ ಬರೆದು ಪುಂಡಾಟ ಮೆರೆದಿದ್ದಾರೆ. ಘಟನೆ ಸಂಬಂಧ ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿಕೊಂಡು ಗೋಡೆ ಮೇಲೆ ಬರೆದವರ ಹುಡುಕಾಟ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಬಳಿಕ ಗೋಡೆಗಳಿಗೆ ಬಣ್ಣ ಬಳಿದು ಬರಹಗಳನ್ನ ಅಳಿಸಿ ಹಾಕಿದ್ದಾರೆ.

-masthmagaa.com

Contact Us for Advertisement

Leave a Reply