ಬಿಜೆಪಿ ಜೊತೆ ಮೈತ್ರಿ ಮಾಡ್ಕೊಂಡಿದ್ದೇ ವೇಸ್ಟ್​: ಶಿವಸೇನೆ- ಬಿಜೆಪಿ ಫೈಟ್

masthmagaa.com:

ಮಹಾರಾಷ್ಟ್ರ ಸಿಎಂ, ಶಿವಸೇನೆ ನಾಯಕ ಉದ್ಧವ್ ಠಾಕ್ರೆ ಬಿಜೆಪಿ ಜೊತೆಗಿದ್ದ 25 ವರ್ಷ ವೇಸ್ಟ್ ಆಗೋಯ್ತು ಅಂತ ಹೇಳಿದ್ದಾರೆ. ಪಕ್ಷದ ವಕ್ತಾರ ಸಂಜಯ್ ರಾವತ್ ಅಂತೂ, ಬಾಬ್ರಿ ಮಸೀದಿ ಧ್ವಂಸವಾದಾಗ ಉತ್ತರ ಭಾರತದಲ್ಲಿ ಶಿವಸೇನೆಯದ್ದೇ ಅಲೆ ಇತ್ತು. ಒಂದು ವೇಳೆ ನಾವು ಮಹಾರಾಷ್ಟ್ರದ ಹೊರಗೂ ಚುನಾವಣೆಗೆ ಸ್ಪರ್ಧಿಸಿದ್ರೆ ನಮ್ಮವರು ಅಂದ್ರೆ ಶಿವಸೇನೆಯವರೇ ಪ್ರಧಾನಿಯಾಗಿರ್ತಿದ್ರು. ಆದ್ರೆ ನಾವು ಈ ಅವಕಾಶವನ್ನು ಬಿಜೆಪಿಗೆ ಬಿಟ್ಟುಕೊಟ್ವಿ ಅಂತ ಹೇಳಿದ್ದಾರೆ. ಇದ್ರಿಂದ ಕೆಂಡವಾಗಿ ಪ್ರತಿಕ್ರಿಯಿಸಿರೋ ಬಿಜೆಪಿ ನಾಯಕ ದೇವೇಂದ್ರ ಫಡ್ನಾವಿಸ್​​, ಮುಂಬೈನಲ್ಲಿ ಬಿಜೆಪಿ ಕಾರ್ಪೊರೇಟರ್ ಇದ್ದಾಗ ಅವರ ಶಿವಸೇನೆ ಪಕ್ಷ ಹುಟ್ಟೇ ಇರಲಿಲ್ಲ. ನಮ್ಮ ಜೊತೆಗಿರುವಾಗ ಶಿವಸೇನೆ ಒಂದು ಅಥವಾ 2ನೇ ಸ್ಥಾನದಲ್ಲಿ ಇರ್ತಿತ್ತು. ಆದ್ರೀಗ ಅವರ ಪಕ್ಷ 4ನೇ ಸ್ಥಾನದಲ್ಲಿದೆ ಅಂತ ಹೇಳಿದ್ದಾರೆ. ರಾಮಮಂದಿರ ಚಳವಳಿ ವೇಳೆ ನೀವು ಭಾಷಣ ಮಾತ್ರ ಮಾಡಿದ್ರಿ.. ಗುಂಡು ಮತ್ತು ಲಾಠಿಯ ಏಟನ್ನು ಎದುರಿಸಿದವರು ನಾವು ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply