ಶಿವಣ್ಣನ ಕೈಲಿದೆ ಸಾಲು ಸಾಲು ಸಿನಿಮಾ !

masthmagaa.com:

ಸೆಂಚುರಿ ಸ್ಟಾರ್‌ ಶಿವಣ್ಣ ಇಂದು ತಮ್ಮ 61ನೇ ವರ್ಷದ ಹುಟ್ಟುಹಬ್ಬವನ್ನ ಆಚರಿಸಿಕೊಳ್ತಾ ಇದ್ದಾರೆ. ತಮ್ಮ 61ನೇ ವರ್ಷದಲ್ಲೂ ಯಂಗ್‌ ಆಂಡ್‌ ಎನರ್ಜಿಟಿಕ್‌ ಆಗಿರುವ ಶಿವಣ್ಣನ ಕೈಲಿ ಒಟ್ಟು 10 ಸಿನಿಮಾಗಳು ಇದೆ. ಇದರಲ್ಲಿ ಕೆಲವೊಂದು ಸಿನಿಮಾಗಳ ಅನೌನ್ಸ್‌ಮೆಂಟ್‌ ಕೂಡ ಆಗಿದೆ. ಶಿವಣ್ಣನ ಬರ್ತ್‌ಡೇ ಅಂದ್ರೆ ಇವತ್ತು ಅಭಿಮಾನಿಗಳಿಗೆ ಹಬ್ಬ ಅಂತಾನೇ ಹೇಳಬೋದು.

ಗಣೇಶ್ ಜೊತೆ ಹೊಸ ಸಿನಿಮಾ
‘ಪ್ರೊಡಕ್ಷನ್ ನಂಬರ್ 6’ ಅಂತ ಸದ್ಯಕ್ಕೆ ಇಟ್ಟಿರುವ ಹೆಸರು. ಇಂದು ರಿಲೀಸ್ ಆದ ಹೊಸ ಪೋಸ್ಟರ್ ಎಲ್ಲರ ಗಮನ ಸೆಳೆದಿದೆ. ಕೆಎಸ್​ ರವಿಕುಮಾರ್ ಅವರು ಈ ಚಿತ್ರವನ್ನು ನಿರ್ದೇಶನ ಮತ್ತು ಎಂ ಬಿ ಬಾಬು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಶಿವಣ್ಣ ಮತ್ತು ಗಣೇಶ್‌ ಒಟ್ಟಾಗಿ ಕಾಣಿಸಿಕೊಳ್ಳಲಿದ್ದಾರೆ.

ಲಕ್ಕಿ ಗೋಪಾಲ್ ಸಿನಿಮಾಗೆ ಟೈಟಲ್
ಲಕ್ಕಿ ಗೋಪಾಲ್ ಅವರು ಶಿವರಾಜ್​ಕುಮಾರ್ ಅವರ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಮೈಲಾರಿ ಅವರು ಈ ಚಿತ್ರವನ್ನು ನಿರ್ಮಾಣ ಮಾಡ್ತಿದ್ದಾರೆ. ಈ ಚಿತ್ರಕ್ಕೆ ‘IV Returns’ ಎಂದು ಟೈಟಲ್ ಕೊಟ್ಟಿದ್ದಾರೆ.

ಇನ್ನೊಂದು ಸಿನಿಮಾದ ಟೈಟಲ್‌ ಇನ್ನು ಫೈನಲ್‌ ಆಗಿಲ್ಲ, ಆದ್ರೆ ಶಿವಣ್ಣನ ಒಂದು ಪೋಸ್ಟರ್‌ ಮಾತ್ರ ರಿಲೀಸ್‌ ಆಗಿದೆ. ಈ ಪೋಸ್ಟರ್‌ನಲ್ಲಿ ಶಿವಣ್ಣ ಸೈನಿಕನಾಗಿ ಕಾಣಿಸಿದ್ದಾರೆ. ರಾಮ್ ಧೂಲಿಪುಡಿ ನಿರ್ದೇಶನದ ಚಿತ್ರದಲ್ಲಿ ಈ ಚಿತ್ರ ಮೂಡಿಬರಲಿದೆ.

-masthmagaa.com

Contact Us for Advertisement

Leave a Reply