ಅಫ್ಘಾನಿಸ್ತಾನವನ್ನ ಮಣಿಸಿ ಸೂಪರ್‌-4ಗೆ ಲಗ್ಗೆಯಿಟ್ಟ ಶ್ರೀಲಂಕಾ!

masthmagaa.com:

ನೆಟ್‌ ರನ್‌ ರೇಟ್‌ ಕ್ಯಾಲ್ಕುಲೇಟ್‌ ಮಾಡುವದ್ರಲ್ಲಾದ ಯಡವಟ್ಟಿನಿಂದ ಅಫ್ಘಾನಿಸ್ತಾನ ಏಷ್ಯಾ ಕಪ್‌ನ ಸೂಪರ್‌-4 ಪ್ರವೇಶ ಪಡಯೋ ಅವಕಾಶವನ್ನ ಕಳ್ಕೊಂಡಿದೆ. ನಿನ್ನೆ ನಡೆದ ಕೊನೆಯ ಗ್ರೂಪ್‌ ಹಂತದ ಪಂದ್ಯದಲ್ಲಿ ಶ್ರೀಲಂಕ ವಿರುದ್ಧ 2 ರನ್‌ಗಳ ಅಂತರದಲ್ಲಿ ಸೋತಿದ್ದು, ಶ್ರೀಲಂಕಾ ಸೂಪರ್‌-4 ಪ್ರವೇಶ ಮಾಡಿದೆ. ಅಂದ್ಹಾಗೆ ಬಾಂಗ್ಲಾದೇಶದ ವಿರುದ್ಧ ಪಂದ್ಯ ಸೋತಿದ್ದರಿಂದ ಅಫ್ಘಾನಿಸ್ತಾನದ ನೆಟ್‌ ರನ್‌ ರೇಟ್‌ ಬಹಳ ಕಡಿಮೆ ಇತ್ತು. ಹೀಗಾಗಿ ಟಾಪ್‌-2ರಲ್ಲಿ ಬಂದು ಸೂಪರ್‌-4 ಹಂತಕ್ಕೆ ತಲುಪಬೇಕು ಅಂದ್ರೆ ಲಂಕಾ ನೀಡಿದ 292ರನ್‌ಗಳ ಟಾರ್ಗೆಟ್‌ನ್ನ 37.1 ಓವರ್‌ನಲ್ಲಿ ಚೇಸ್‌ ಮಾಡಬೇಕಾಗಿತ್ತು. ಈ ವೇಳೆ ವೀರೋಚಿತವಾಗಿ ಬ್ಯಾಟ್‌ ಬೀಸಿದ ಅಫ್ಘಾನ್‌ ಬ್ಯಾಟರ್‌ಗಳು ಇನ್ನೇನು ಲಂಕಾ ಟಾರ್ಗೆಟ್‌ನ್ನ ಚೇಸ್‌ ಮಾಡೋ ಹಂತದಲ್ಲಿದ್ರು. 37 ಓವರ್‌ ಅಂತ್ಯಕ್ಕೆ 289ರನ್‌ ಗಳಿಸಿದ್ರು. ಹೀಗಾಗಿ 1 ಬಾಲ್‌ನಲ್ಲಿ 3 ರನ್‌ ಬೇಕಿತ್ತು. ಆದ್ರೆ ‌ಆ ಬಾಲ್‌ನಲ್ಲಿ ಮುಜೀಬ್‌ ಔಟ್‌ ಆದ್ರು. ಈ ಹಂತದಲ್ಲಿ ಇನ್ನು ಕೂಡ ಅಪ್ಘಾನ್‌ ನೆಟ್‌ ರನ್‌ ರೇಟ್‌ ಏರಿಕೆಯಾಗೋಕೆ ಅವಕಾಶ ಇತ್ತು. ಯಾಕಂದ್ರೆ ಟಾರ್ಗೆಟ್‌ 292 ಆದ್ರುನು ಅದ್ರ ಹತ್ತಿರ ಬಂದು ಬೌಂಡರಿ, ಸಿಕ್ಸರ್‌ ಬಾರಿಸಿದ್ರೆ ಎಕ್ಸ್‌ಟ್ರಾ ರನ್‌ ಸಿಗ್ತಿತ್ತು, ನೆಟ್‌ ರನ್‌ ರೇಟ್‌ ಏರಿಕೆ ಆಗ್ತಿತ್ತು. ಈ ರೀತಿ 38.1ನೇ ಬಾಲ್‌ವರೆಗೆ ಅವಕಾಶ ಇತ್ತು. ಆದ್ರೆ 38.1 ಬಾಲ್‌ಗೆ ತಮ್ಮ ಅವಕಾಶ ಮುಗೀತು ಅಂತ ತಿಳಿದ ಅಫ್ಘಾನ್‌ ನಂತರದ ಬಾಲ್‌ಗಳನ್ನ ಡಾಟ್‌ ಮಾಡ್ತು. ಕೊನೆಗೆ 37.4 ಓವರ್‌ಗಳಲ್ಲಿ 289 ರನ್‌ಗಳಿಸಿ ಆಲೌಟ್‌ ಆಗಿ ಟೂರ್ನಿಯಿಂದ ಹೊರ ಬಿದ್ದಿದೆ.

-masthmagaa.com

Contact Us for Advertisement

Leave a Reply