ವರ್ಗಾವಣೆ ಆರೋಪ ಸಾಬೀತಾದ್ರೆ ರಾಜಕೀಯ ನಿವೃತ್ತಿ ತಗೋತಿನಿ: ಸಿದ್ಧರಾಮಯ್ಯ

masthmagaa.com:

ಆಡಳಿತ ಹಾಗೂ ವಿಪಕ್ಷಗಳ ನಡುವೆ ಹೊಸತೊಂದು ವಾಕ್ಸಮರಕ್ಕೆ ಕಾರಣವಾಗಿರೊ ಸಿಎಂ ಸಿದ್ದರಾಮಯ್ಯ ಅವರ ಪುತ್ರ ಡಾ. ಯತೀಂದ್ರ ಅವರ ಫೋನ್‌ ಕಾಲ್‌ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಮತ್ತಷ್ಟು ಪ್ರಶ್ನೆಗಳನ್ನ ಮುಂದಿಟ್ಟಿದ್ದಾರೆ. ಈ ಬಾರಿ ಅವ್ರು ಸಾಕ್ಷ್ಯಾಧಾರಗಳನ್ನ ಇಟ್ಟುಕೊಂಡು ಪ್ರಶ್ನೆ ಮಾಡಿದ್ದಾರೆ. ಯತೀಂದ್ರ ಮಾತನಾಡಿದ್ದು, ಸಿಎಂ ಅವರ ವರುಣಾ ಕ್ಷೇತ್ರದಲ್ಲಿ ಐದು ಸರ್ಕಾರಿ ಶಾಲೆಗಳ ಅಭಿವೃದ್ಧಿ ಅಂತ ಕಾಂಗ್ರೆಸ್‌ ಹೇಳಿಕೊಂಡಿದೆ. ಹಾಗೇ ಅದಕ್ಕೆ ಪೂರಕವಾದ ದಾಖಲೆಯನ್ನೂ ಸಿಎಂ ಬಿಡುಗಡೆ ಮಾಡಿದ್ದರು. ಆದ್ರೆ ಅದೆಲ್ಲ ಸುಳ್ಳು ಅಂದಿದ್ದ ಕುಮಾರಸ್ವಾಮಿ, ಇದೀಗ ಮತ್ತೆ ತಮ್ಮ ಪ್ರಶ್ನೆಗಳನ್ನ ಮುಂದಿಟ್ಟಿದ್ದಾರೆ. ಯತೀಂದ್ರ ಮಾತಾಡಿರೊ ಮಹದೇವ್ ಅವರಿಗೆ ಶಿಕ್ಷಣ ಕ್ಷೇತ್ರದ ಮೇಲುಸ್ತುವಾರಿಯನ್ನ ನೀಡಲಾಗಿಲ್ಲ. ಅವರಿಗೆ ನೀಡಲಾಗಿರುವ ಜವಾಬ್ದಾರಿಗಳಲ್ಲಿ ಅಧಿಕಾರಿಗಳ ನಿಯೋಜನೆಯಿದೆ. ಹಾಗಿರುವಾಗ, ಯತೀಂದ್ರ ಮಹದೇವ್ ಅವರಿಗೆ ಯಾವ ಲಿಸ್ಟ್ ಅನ್ನು ಸಿಎಂಗೆ ಕೊಡಲು ಹೇಳಿದ್ದರು? ಅದು ವರ್ಗಾವಣೆಗೆ ಸಂಬಂಧಿಸಿದ ಲಿಸ್ಟ್ ಅಲ್ಲದಿದ್ದರೆ ಮತ್ತೇನು? ಅಂತ ಪ್ರಶ್ನಿಸಿದ್ದಾರೆ.

ಇತ್ತ ವರ್ಗಾವಣೆ ಆರೋಪ ಸಾಬೀತಾದ್ರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಅಂತ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಮಾತಾಡಿದ ಅವ್ರು, ಕುಮಾರಸ್ವಾಮಿ ಅವರ ಆರೋಪಕ್ಕೆ ಯಾವುದೇ ದಾಖಲೆಗಳಿಲ್ಲ. ಆರೋಪವನ್ನ ಸಾಬೀತುಪಡಿಸೋದು ಇಲ್ಲ. ಅವ್ರದ್ದು ಬರಿ ಹಿಟ್‌ ಆಂಡ್‌ ರನ್‌ ಅಂತ ಆರೋಪಿಸಿದ್ದಾರೆ. ಇದೇ ವೇಳೆ ವರ್ಗಾವಣೆ ಮಾಡುವ ಅಧಿಕಾರ ಸರ್ಕಾರಕ್ಕಿದೆ. ಆಡಳಿತದ ದೃಷ್ಠಯಿಂದ ಅದೊಂದು ಸಹಜ ಪ್ರಕ್ರಿಯೆ. ಇದನ್ನ ದಂಧೆ ಮಾಡಿಕೊಂಡದ್ದು ಅವ್ರು, ನಾವಲ್ಲ. ವರ್ಗಾವಣೆ ಆರೋಪ ಸಾಬೀತಾದ್ರೆ ರಾಜಕೀಯ ನಿವೃತ್ತಿ ತೆಗೆದುಕೊಳ್ತೇನೆ ಎಂದಿದ್ದಾರೆ.

-masthmagaa.com

Contact Us for Advertisement

Leave a Reply