ನಿಮ್ಮ ಕೆಲಸ ನೀವು ನೋಡಿಕೊಳ್ಳಿ: PCB ಮುಖ್ಯಸ್ಥರಿಗೆ ಶಾಹಿದ್‌ ಅಫ್ರಿದಿ‌ ಕ್ಲಾಸ್

masthmagaa.com:

ಪಾಕ್ ಮಾಜಿ ಕ್ಯಾಪ್ಟನ್‌ ಶಾಹಿದ್‌ ಅಫ್ರಿದಿ ಪಾಕಿಸ್ತಾನ್ ಕ್ರಿಕೆಟ್‌ ಬೋರ್ಡ್‌(‌PCB) ಮುಖ್ಯಸ್ಥ ಜಾ಼ಕಾ ಅಶ್ರಫ್‌ಗೆ ಬಾಬರ್‌ ಅಜಂ ವಿಷಯಕ್ಕೆ ಸಂಬಂಧಿಸಿದಂತೆ ಫುಲ್‌ ಕ್ಲಾಸ್ ತಗೊಂಡಿದ್ದಾರೆ. “ಜಾ಼ಕಾ ಅಶ್ರಫ್‌ ಒಂದು ಕ್ಲಬ್‌ನ ಮುಖ್ಯಸ್ಥರಲ್ಲ, ಅವ್ರು PCBಯ ಚೇರ್ಮನ್.‌ ನೀವು ಮೀಡಿಯಾದವ್ರಿಗೆ ಕಾಲ್‌ ಮಾಡಿ ಅವರ ಪ್ರಾಬ್ಲಮ್‌ಗಳನ್ನ ಸರಿ ಮಾಡೋಕೆ ಅಲ್ಲಿ ಕುಳಿತಿಲ್ಲ. ನೀವು ನಿಮ್ಮ ಕೆಲಸ ನೋಡಿಕೊಳ್ಳಿ. ನೀವು ಮಾಡಿದ ಕೆಲಸದಿಂದಾನೆ ಜನ ನಿಮ್ಮನ್ನ ಟೀಕೆ ಮಾಡ್ತಿರೋದು ಅಂತ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅಂದ್ಹಾಗೆ ಮೊನ್ನೆಯಷ್ಟೇ ಪಾಕ್‌ ಕ್ರಿಕೆಟ್‌ ಟೀಮ್‌ ಕ್ಯಾಪ್ಟನ್‌ ಬಾಬರ್‌ ಅಜಂ ಕಾಲ್‌, ಮೆಸೇಜ್‌ಗಳಿಗೆ PCB ಚೇರ್ಮನ್‌ ಪ್ರತಿಕ್ರಿಯೆ ನೀಡ್ತಿಲ್ಲ ಅನ್ನೊ ವಿಚಾರ ಸದ್ದು ಮಾಡಿತ್ತು. ಈ ಬಗ್ಗೆ ಜಾ಼ಕಾ ಅಶ್ರಫ್‌ ವಾಟ್ಸಾಪ್‌ನಲ್ಲಿ ಬಾಬರ್‌ ಅಜಂರನ್ನ ಪ್ರಶ್ನೆ ಮಾಡಿದ್ರು. ಅದಕ್ಕೆ ಬಾಬರ್‌ ಇದೆಲ್ಲ ಸುಳ್ಳು ಅಂತ ರಿಪ್ಲೈ ಮಾಡಿದ್ರು. ಇಷ್ಟಕ್ಕೆ ಸುಮ್ಮನಿರದ ಜಾ಼ಕಾ ಅಶ್ರಫ್‌ ತಾವು ಬಾಬರ್‌ಗೆ ಮಾಡಿದ್ದ ಮೆಸೇಜ್‌ ಸ್ಕ್ರೀನ್‌ಶಾಟ್‌ನ್ನ ಮೀಡಿಯಾಗೆ ಕೊಟ್ಟು ಟೆಲಿಕಾಸ್ಟ್‌ ಮಾಡಲು ಹೇಳಿದ್ದಾರೆ. ಇದೇ ವಿಷಯಕ್ಕೆ ಈಗ ಆಲ್‌ರೌಂಡರ್‌ ಅಫ್ರಿದಿಯ ಕೋಪಕ್ಕೆ ಗುರಿಯಾಗಿದ್ದಾರೆ. ಪಾಕ್‌ ತಂಡ ವಿಶ್ವಕಪ್‌ನಲ್ಲಿ ಪಂದ್ಯಗಳನ್ನ ಗೆಲ್ಲೋಕೆ ಪರದಾಡ್ತಿರೊ ಟೈಮಲ್ಲಿ ನೀವು ಸೋಶಿಯಲ್‌ ಮೀಡಿಯಾದ ಸಮಸ್ಯೆಗಳಿಗೆ ತಲೆ ಕೆಡಿಸಿಕೊಂಡು ಕೂತಿದ್ದೀರ? ಅಂತ ಪ್ರಶ್ನೆ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply