ಹೊಸ ಬ್ಯುಸಿನೆಸ್‌ಗೆ ಕೈ ಹಾಕಿದ ದಕ್ಷಿಣ ಭಾರತೀಯ ನಟ ನಯನ್‌ ತಾರಾ

masthmagaa.com:

ದಕ್ಷಿಣ ಭಾರತದ ಪ್ರಮುಖ ನಟಿಯರಲ್ಲಿ ಒಬ್ಬರಾದ ನಯನತಾರಾ ಅವರು ನಟನೆ ಜೊತೆಗೆ ಹೊಸ ಉದ್ಯಮಕ್ಕೆ ಕೈ ಹಾಕಿದ್ದಾರೆ. ಸದ್ಯ ಜವಾನ್ ಚಿತ್ರದ ಶೂಟಿಂಗ್‌ನಲ್ಲಿ ಬ್ಯೂಸಿ ಇರುವ ನಯನ್‌ ತಾರಾ ತಮ್ಮ ಗಂಡನ ಜೊತೆ ಆಸ್ತಿವೊಂದನ್ನ ಖರೀದಿ ಮಾಡುವ ಮೂಲಕ ಹೊಸ ಬ್ಯುಸಿನೆಸ್‌ ಮಾಡೋ ಪ್ಲಾನ್‌ ಮಾಡಿದ್ದಾರೆ.

ಕೊರೋನಾ ನಂತರ ಎಲ್ಲಾ ಥಿಯೇಟರ್‌ಗಳು ಮುಚ್ಚಿ ಹೋಗಿತ್ತು. ಕೊರೋನಾ ನಂತರ ಥೇಟರ್‌ಗೆ ಜನ ಬರ್ತಾ ಇಲ್ಲ ಅಂತ ಥೇಟರ್‌ ಒನರ್‌ಗಳು ಕಂಗಾಲಾಗಿದ್ರು. ಹಾಗೇನೆ ಚೆನ್ನೈನಲ್ಲಿರುವ ಅಗಸ್ತ್ಯ ಥೇಟರ್‌ನ್ನ ಕೂಡ ಅದರ ಮಾಲೀಕರು ಮಾರಲು ಮುಂದಾಗಿದ್ರು. ಇದೇ ಥೇಟರ್‌ನ್ನ ನಯನ್‌ ತಾರಾ ಮತ್ತು ವಿಘ್ನೇಶ್‌ ಜೋಡಿ ಖರೀದಿಮಾಡಿದ್ದಾರೆ. 1967ರಲ್ಲಿ ಶುರುವಾದ ಈ ಥೇಟರ್‌ ದೇವಿ ಥೇಟರ್‌ ಗ್ರೂಪ್ಸ್‌ನ ಒಡೆತನದಲ್ಲಿದೆ. 53 ವರ್ಷಗಳ ಮನರಂಜನೆ ನಂತರ 2020ರ ಕೊರೋನಾ ಟೈಮ್‌ನಲ್ಲಿ ಕ್ಲೋಸ್‌ ಮಾಡಲಾಗಿತ್ತು. ಇದೇ ಥೇಟರ್‌ ಅನ್ನ ಈಗ ನಯನ್‌ ತಾರಾ ವರು ಖರೀದಿ ಮಾಡಿ ಅದನ್ನ ಹೊಸ ರೀತಿಯಲ್ಲಿ ಚೇಂಜ್‌ ಮಾಡೋ ಪ್ಲಾನ್‌ ಮಾಡ್ತಾ ಇಡ್ತಾರೆ.

ಸಿಂಗಲ್‌ ಸ್ಕ್ರೀನ್‌ ಇರುವ ಈ ಥೇಟರ್‌ನಲ್ಲಿ ಡಬಲ್‌ ಸ್ಕ್ರೀನ್‌ ಹಾಕಿ ಒಂದು ಸಲಕ್ಕೆ ಸುಮಾರು 1000ಕ್ಕೂ ಅಧಿಕ ಜನ ಕುಳಿತು ನೋಡುವ ಸೌಲಭ್ಯದೊಂದಿಗೆ ನವೀಕರಣಗೊಳಿಸುವ ಯೋಜನೆಯನ್ನ ಈ ಜೋಡಿ ಹಾಕಿಕೊಂಡಿದ್ದಾರೆ.

-masthmagaa.com

Contact Us for Advertisement

Leave a Reply