ದಕ್ಷಿಣ ಕೊರಿಯಾದಲ್ಲಿ ನಾಯಿ ಮಾಂಸ ಬ್ಯಾನ್?

masthmagaa.com:

ನಾಯಿ ಮಾಂಸ ಸೇವನೆಯನ್ನು ಕಾನೂನು ಬಾಹಿರ ಅಂತ ಘೋಷಿಸುವ ಸಂಬಂಧ ಚಿಂತನೆ ನಡೆಸಲು ಕಾರ್ಯಪಡೆಯನ್ನು ಸ್ಥಾಪಿಸಲಾಗುತ್ತೆ ಅಂತ ದಕ್ಷಿಣ ಕೊರಿಯಾ ತಿಳಿಸಿದೆ. ಅಧ್ಯಕ್ಷ ಮೂನ್ ಜೆ ಇನ್ ಎರಡು ತಿಂಗಳ ಹಿಂದಷ್ಟೇ ಶತಮಾನಗಳಿಂದ ಬೆಳೆದು ಬಂದ ಆಹಾರ ಪದ್ಧತಿಯನ್ನು ಬದಲಿಸೋ ಬಗ್ಗೆ ಚಿಂತನೆ ನಡೆಸೋದಾಗಿ ತಿಳಿಸಿದ್ರು. ಈಗಾಗಲೇ ದೇಶದಲ್ಲಿ ನಾಯಿ ಮಾಂಸ ಮಾರೋ ರೆಸ್ಟೋರೆಂಟ್​​ಗಳು ಬಂದ್ ಆಗೋ ಹಂತಕ್ಕೆ ಬಂದಿವೆ. ಯಾಕಂದ್ರೆ ಇಲ್ಲಿನ ಯುವಪೀಳಿಗೆ ಮಾಂಸಾಹಾರವನ್ನು ಇಷ್ಟಪಡ್ತಿಲ್ಲ. ಇದಕ್ಕೆ ಪ್ರಮುಖ ಕಾರಣ ಅಂದ್ರೆ ಇಲ್ಲಿ ನಾಯಿ ಮತ್ತು ಬೆಕ್ಕುಗಳನ್ನು ಸಾಕುವವರ ಸಂಖ್ಯೆ ಜಾಸ್ತಿಯಾಗ್ತಿದೆ. ಆದ್ರೆ ಇತ್ತೀಚೆಗೆ ನಡೆಸಿದ ಸಮೀಕ್ಷೆಯಲ್ಲಿ ಹೆಚ್ಚಿನ ಜನ ಮಾಂಸಾಹಾರ ಬ್ಯಾನ್ ಮಾಡೋದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಸರ್ಕಾರ ಈಗ ಅಧಿಕಾರಿಗಳು, ಜನರು ಮತ್ತು ತಜ್ಞರನ್ನೊಳಗೊಂಡ ಒಂದು ಸಮಿತಿ ರಚಿಸಲು ಮುಂದಾಗಿದೆ. ಜೊತೆಗೆ ನಾಯಿಗಳ ಫಾರಂ, ರೆಸ್ಟೋರೆಂಟ್ ಮತ್ತು ಬೇರೆ ಜಾಗಗಳಿಂದ ಮಾಹಿತಿ ಸಂಗ್ರಹಿಸಿ ಅಂತಿಮ ನಿರ್ಧಾರಕ್ಕೆ ಬರಲಾಗುತ್ತೆ ಅಂತ ಕೂಡ ಘೋಷಿಸಿದೆ. ನಾಯಿಗಳನ್ನು ಸಾಕುವವರ ಸಂಘದ ಪ್ರಕಾರ ಪ್ರತಿ ವರ್ಷ ದಕ್ಷಿಣ ಕೊರಿಯಾದಲ್ಲಿ ತಿನ್ನೋ ಉದ್ದೇಶದಿಂದ 10ರಿಂದ 15 ಲಕ್ಷ ನಾಯಿಗಳನ್ನು ಕೊಂದು ಹಾಕಲಾಗುತ್ತೆ. ಕೊರಿಯಾ ಮಾತ್ರವಲ್ಲ.. ಚೀನಾ, ನೈಜೀರಿಯಾ, ಸ್ವಿಡ್ಜರ್​ಲ್ಯಾಂಡ್​​, ವಿಯೆಟ್ನಾಂ ಸೇರಿದಂತೆ ಹಲವು ದೇಶಗಳಲ್ಲಿ ಜನ ನಾಯಿ ಮಾಂಸ ತಿಂತಾರೆ. ಇಲ್ಲಿ ಕುರಿಗಳನ್ನು ಚರ್ಮ ಜಾರ್ಸಿ, ನೇತಾಕಿ ಮಾರ್ತಾರಲ್ವಾ.. ಅಲ್ಲಿ ನಾಯಿ ಮಾಂಸವನ್ನೂ ಅದೇ ರೀತಿ ಕುಯ್​ಗುಟ್ಸಿ ಮಾರ್ತಾರೆ.

-masthmagaa.com

Contact Us for Advertisement

Leave a Reply