ಈ ದೇಶದಲ್ಲಿ ಬಟ್ಟೆ ಇಲ್ಲದೇ ಬೆತ್ತಲೆ ಓಡಾಡೋದು ಲೀಗಲ್‌ ಅಂತೆ!

masthmagaa.com:

ಸ್ಪೇನ್‌ನ ವ್ಯಕ್ತಿಯೊಬ್ಬ ಬಟ್ಟೆಯಿಲ್ಲದೆ ವೆಲೆನ್ಸಿಯಾ ಪ್ರದೇಶದಲ್ಲಿ ಓಡಾದಿದಕ್ಕೆ ಅಲ್ಲಿನ ಸರ್ಕಾರ ದಂಡ ವಿಧಿಸಿದೆ. ಇದನ್ನ ಪ್ರಶ್ನಿಸಿ ಕೋರ್ಟ್‌ಗೆ ಹೋಗಿದ್ದ ವ್ಯಕ್ತಿಯ ಪರವಾಗಿ ಅಲ್ಲಿನ ಹೈ ಕೋರ್ಟ್‌ ತೀರ್ಪು ನೀಡಿದೆ. ದಂಡವನ್ನ ರದ್ದುಗೊಳಿಸಿ ಹಾಗೂ ಸ್ಪೇನ್‌ನಲ್ಲಿ ಸಾರ್ವಜನಿಕವಾಗಿ ಬಟ್ಟೆಯಿಲ್ಲದೆ ಓಡಾಡೋದು ಲೀಗಲ್‌ ಅಂತ ಹೈಕೋರ್ಟ್‌ ಹೇಳಿದೆ. ಅಂದಹಾಗೆ 1988ರಲ್ಲಿಯೇ ಸ್ಪೇನ್‌ನಲ್ಲಿ ಯಾರು ಬೇಕಾದರೂ ಬಟ್ಟೆಯಿಲ್ಲದೆ ಬೀದಿಗಳಲ್ಲಿ ಸಂಚಾರ ಮಾಡ್ಬೋದು ಅಂತ ಲೀಗಲ್‌ ಮಾಡಲಾಗಿದೆ. ಆದ್ರೆ ಕೆಲವು ಪ್ರದೇಶಗಳು ತಮ್ಮ ಸ್ವಂತ ಕಾನೂನುನ್ನ ಇದರ ವಿರುದ್ಧ ಮಾಡಿಕೊಂಡಿವೆ. ಆದ್ರೆ ವ್ಯಕ್ತಿ ಓಡಾಡಿದ್ದ ವೆಲೆನ್ಸಿಯಾದಲ್ಲಿ ಈ ತರಹದ ಯಾವುದೇ ನಿರ್ಬಂಧ ಇಲ್ಲ ಅಂತ ಕೋರ್ಟ್‌ ತಿಳಿಸಿದೆ.

-masthmagaa.com

Contact Us for Advertisement

Leave a Reply