ದೇಶದಲ್ಲಿ ಒಂದೇ ದಿನ 4 ಸಾವಿರಕ್ಕೂ ಹೆಚ್ಚು ಜನರಿಗೆ ಸೋಂಕು..!

masthmagaa.com:

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 4,213 ಜನರಿಗೆ ಹೊಸದಾಗಿ ಕೊರೋನಾ ಸೋಂಕು ಹರಡಿದೆ ಅಂತ ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. ಒಂದೇ ದಿನದಲ್ಲಿ ಈ ಪ್ರಮಾಣದ ಸೋಂಕಿತರು ಪತ್ತೆಯಾಗಿರೋದು ಇದೇ ಮೊದಲು. ಈ ಮೂಲಕ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 67,152ಕ್ಕೆ ಏರಿಕೆಯಾಗಿದೆ. ನಿನ್ನೆ ಮತ್ತೆ 97 ಮಂದಿ ಮೃತಪಟ್ಟಿದ್ದು, ದೇಶದಲ್ಲಿ ಕೊರೋನಾಗೆ ಬಲಿಯಾದವರ ಸಂಖ್ಯೆ 2,206ಕ್ಕೆ ಏರಿಕೆಯಾಗಿದೆ.

ದೇಶದಲ್ಲಿ ಇದುವರೆಗೆ 20,917 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. 44,029‬ ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾಯಿಲೆಯ ಹಾಟ್​ಸ್ಪಾಟ್​ ಆಗಿರೋ ಮಹಾರಾಷ್ಟ್ರದಲ್ಲಿ ಒಟ್ಟು ಕಾಯಿಲೆ ಪೀಡಿತರ ಸಂಖ್ಯೆ 22 ಸಾವಿರ ಗಡಿ ದಾಟಿದೆ. ಗುಜರಾತ್, ತಮಿಳುನಾಡು, ದೆಹಲಿ ಮತ್ತು ರಾಜಸ್ಥಾನ ನಂತರದ ಸ್ಥಾನದಲ್ಲಿವೆ.

ಟಾಪ್​-5 ಕೊರೋನಾ ಪೀಡಿತ ರಾಜ್ಯಗಳು:

1. ಮಹಾರಾಷ್ಟ್ರ: 22,171 (832 ಸಾವು)

2. ಗುಜರಾತ್: 8,194 (493 ಸಾವು)

3. ತಮಿಳುನಾಡು: 7,204 (47 ಸಾವು)

4. ದೆಹಲಿ: 6,923 (73 ಸಾವು)

5. ರಾಜಸ್ಥಾನ: 3,814 (107 ಸಾವು)

-masthmagaa.com

Contact Us for Advertisement

Leave a Reply