ಶ್ರೀಲಂಕಾದಲ್ಲಿ ಮ್ಯಾಕ್‌ಡೊನಾಲ್ಡ್ಸ್‌ನ ಎಲ್ಲಾ ಸ್ಟೋರ್‌ಗಳು ಬಂದ್‌!

masthmagaa.com:

ಮಹತ್ವದ ಬೆಳವಣಿಗೆಯಲ್ಲಿ ಸುಪ್ರಸಿದ್ಧ ಮ್ಯಾಕ್‌ಡೊನಾಲ್ಡ್ಸ್‌ ಇದೀಗ ಶ್ರೀಲಂಕಾದಲ್ಲಿರೋ ತನ್ನೆಲ್ಲಾ ಸ್ಟೋರ್‌ಗಳ ಬಾಗಿಲು ಮುಚ್ಚಿದೆ. ಎಸ್‌… ಶ್ರೀಲಂಕಾದಲ್ಲಿರೋ ಮ್ಯಾಕ್‌ಡೊನಾಲ್ಡ್ಸ್‌ ಸ್ಟೋರ್‌ಗಳು ಸ್ವಚ್ಛತೆಯನ್ನ ಕಾಪಾಡ್ತಿಲ್ಲ. ಅಂತಾರಾಷ್ಟ್ರೀಯ ನೈರ್ಮಲ್ಯ ಮಾನದಂಡಗಳನ್ನ ಪಾಲಿಸೋಕೆ ವಿಫಲವಾಗಿದೆ ಅಂತ ಮ್ಯಾಕ್‌ಡೊನಾಲ್ಡ್ಸ್‌ನ ಪೋಷಕ ಕಂಪನಿ, ಲಂಕಾದ ಲೋಕಲ್‌ ಫ್ರ್ಯಾಂಚೈಸಿ ಹೋಲ್ಡರ್‌ ಮೇಲೆ ಆರೋಪಿಸಿದೆ. ಸೋ ಇದೀಗ ಶ್ರೀಲಂಕಾದ ಕಮರ್ಷಿಯಲ್‌ ಹೈಕೋರ್ಟ್‌ ಅಲ್ಲಿನ ಮ್ಯಾಕ್‌ಡೊನಾಲ್ಡ್ಸ್‌ ಸ್ಟೋರ್‌ಗಳನ್ನ ಏಪ್ರಿಲ್‌ 14ರವರೆಗೆ ಮುಚ್ಚಲು ಆದೇಶಿಸಿದೆ.

-masthmagaa.com

Contact Us for Advertisement

Leave a Reply