ತಮಿಳು ಸಮುದಾಯಕ್ಕೆ ರಾಜಕೀಯ ಹಕ್ಕು ನೀಡೋಕೆ ಶ್ರೀಲಂಕಾ ಅಧ್ಯಕ್ಷ ಬೆಂಬಲ!

masthmagaa.com:

ಶ್ರೀಲಂಕಾದಲ್ಲಿರೋ ಅಲ್ಪಸಂಖ್ಯಾತ ತಮಿಳು ಸಮುದಾಯಕ್ಕೆ ರಾಜಕೀಯ ಹಕ್ಕುಗಳನ್ನ ನೀಡೋ ಬಗ್ಗೆ ಇದೀಗ ಶ್ರೀಲಂಕಾ ಅಧ್ಯಕ್ಷ ರನಿಲ್‌ ವಿಕ್ರಮಸಿಂಘೆ ಬೆಂಬಲ ಸೂಚಿಸಿದ್ದಾರೆ. ಭಾರತ ಪ್ರಸ್ತಾಪಿಸಿದ್ದ ದೀರ್ಘಕಾಲದ ಈ 13ನೇ ತಿದ್ದುಪಡಿಗೆ ಕೊನೆಗೂ ಮಾನ್ಯತೆ ಸಿಗುವಂತೆ ಕಾಣ್ತಿದೆ. ಅಂದ್ಹಾಗೆ 1987ರಲ್ಲಿ ಭಾರತ ಮತ್ತು ಲಂಕಾ ಒಪ್ಪಂದದ ನಂತ್ರ ಶ್ರೀಲಂಕಾದ ಸಂವಿಧಾನದಲ್ಲಿ ಈ 13ನೇ ತಿದ್ದುಪಡಿಯನ್ನ ಮಾಡಲಾಗಿತ್ತು. ಅದ್ರಂತೆ ತಮಿಳಿಗರು ಹೆಚ್ಚಿರೋ ಈಸ್ಟರ್ನ್‌ ಮತ್ತು ನಾರ್ದರ್ನ್‌ ಪ್ರಾಂತ್ಯಗಳಲ್ಲಿ ಅಸೆಂಬ್ಲಿ ರಚಿಸೋದು. ಈ ಸರ್ಕಾರಗಳಿಗೆ ಹೆಚ್ಚಿನ ಅಧಿಕಾರ ನೀಡೋದು ಈ ತಿದ್ದುಪಡಿಯ ಉದ್ದೇಶವಾಗಿತ್ತು. ಆದ್ರೆ ನಾನಾ ಕಾರಣಗಳಿಂದ ಈ ತಿದ್ದುಪಡಿ ಜಾರಿಯಾಗಿಲ್ಲ. ಇನ್‌ಫ್ಯಾಕ್ಟ್‌ 2014ರಿಂದ ಶ್ರೀಲಂಕಾದಲ್ಲಿ ಪ್ರಾಂತೀಯ ಸರ್ಕಾರಗಳ ಎಲೆಕ್ಷನ್ನೇ ನಡೆದಿಲ್ಲ. ಎಲ್ಲ ಪವರ್‌ ಲಂಕಾ ಕೇಂದ್ರ ಸರ್ಕಾರ ಕೈಲಿದೆ. ಹೀಗಾಗಿ ಈ ತಿದ್ದುಪಡಿಯನ್ನ ಜಾರಿ ಮಾಡ್ಬೇಕು ಅನ್ನೋದು ತಮಿಳಿಗರ ಜೊತೆಗೆ ಭಾರತದ ಆಗ್ರಹ ಕೂಡ ಹೌದು. ಹೀಗಾಗಿ ಈಗ ಅದಕ್ಕೆ ಪೂರಕವಾಗಿ ವಿಕ್ರಮಸಿಂಘೆ ಮಾತಾಡಿದ್ದಾರೆ. ʻಅಧಿಕಾರ ಹಸ್ತಾಂತರ ಕೇವಲ ಒಂದು ರಾಜಕೀಯ ಪರಿಕಲ್ಪನೆ ಆಗಬಾರ್ದು. ಬದಲಿಗೆ ಇದೊಂದು ಎಕಾನಾಮಿಕ್‌ ರಿಯಾಲಿಟಿ ಅಂದ್ರೆ ಆರ್ಥಿಕ ವಾಸ್ತವವಾಗ್ಬೇಕುʼ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply