ಶ್ರೀರಾಮನ ವಿಗ್ರಹ ನಿರ್ಮಾಣ: ಅಯೋಧ್ಯೆ ತಲುಪಿದ ನೇಪಾಳದ ಸಾಲಿಗ್ರಾಮ ಶಿಲೆಗಳು!

masthmagaa.com:

ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಾಣವಾಗ್ತಿರೋ ರಾಮ ಮಂದಿರದಲ್ಲಿನ ಶ್ರೀರಾಮ ಮತ್ತು ಸೀತೆಯ ವಿಗ್ರಹಗಳಿಗಾಗಿ ನೇಪಾಳದಿಂದ ಎರಡು ಸಾಲಿಗ್ರಾಮ ಶಿಲೆಗಳನ್ನ ತರಿಸಲಾಗಿದೆ. ಈ ಶಿಲೆಗಳನ್ನ ನೇಪಾಳದ ಕಾಳಿ ಗಂಡಕ್‌ ನದಿಯ ಜಲಪಾತದಿಂದ ಸಂಗ್ರಹಿಸಿ ತರಲಾಗಿದೆ. ಹಿಂದೂ ಧರ್ಮದಲ್ಲಿ ಸಾಲಿಗ್ರಾಮ ಶಿಲೆಗೆ ಪವಿತ್ರ ಸ್ಥಾನ ಇದೆ. ಇದನ್ನ ದೈವ ಶಿಲೆ ಅಂತ ಪರಿಗಣಿಸಲಾಗುತ್ತೆ. ಕೆಲವು ದೇವಸ್ಥಾನಗಳಲ್ಲಿ ವಿಷ್ಣುವಿನ ಅಮೂರ್ತ ರೂಪದ ವಿಗ್ರಹಗಳನ್ನು ಸಾಲಿಗ್ರಾಮ ಶಿಲೆಗಳಿಂದಲೇ ನಿರ್ಮಿಸಲಾಗಿರುತ್ತೆ. ಹೀಗಾಗಿ ಶ್ರೀರಾಮರ ವಿಗ್ರಹಕ್ಕೆ ಈ ಶಿಲೆಗಳನ್ನ ತರಲಾಗಿದೆ. ಒಂದು ಶಿಲೆ 26 ಟನ್‌ ಹಾಗೂ ಇನ್ನೊಂದು ಶಿಲೆ 16 ಟನ್‌ ತೂಕವಿದೆ. ಇವುಗಳಲ್ಲಿ ಮೂರ್ತಿ ತಯಾರಿಕೆ ಸಾಧ್ಯವಿದೆ ಅನ್ನೊದನ್ನ ತಾಂತ್ರಿಕವಾಗಿ ಹಾಗೂ ವೈಜ್ಞಾನಿಕವಾಗಿ ಖಚಿತಪಡಿಸಿಕೊಳ್ಳಲಾಗಿದೆ ಅಂತ ಅಧಿಕಾರಿಗಳು ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply