ವಿಶ್ವ ಸಂಸ್ಥೆಯಲ್ಲಿ ಯುಕ್ರೇನ್‌- ರಷ್ಯಾ ಕಿತ್ತಾಟ!

masthmagaa.com:

ಇನ್ನು ಬುಧವಾರ ತಡರಾತ್ರಿ ನಡೆದ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಸಭೆಯಲ್ಲಿ ಯುಕ್ರೇನ್‌ನ ರಾಯಭಾರಿ ಸೆರ್ಗಿಯ ಕಿಸ್ಲಿಟ್ಸ್ಯಾ ತುಂಬಾ ಎಮೋಷನಲ್‌ ಆಗಿ ಮಾತನಾಡಿದ್ದು, ಯುದ್ಧವನ್ನು ತಡೆಯಲು ಏನೆಲ್ಲ ಮಾಡ್ಬೇಕೋ ಮಾಡಿ ಅಂತ ಸಭೆಯನ್ನ ಕೇಳಿಕೊಂಡ್ರು. ಇದೇ ಸಮಯದಲ್ಲಿ ರಷ್ಯಾದ ರಾಯಭಾರಿ ವಾಸಿಲಿ ನೆಬೆಂಜಿಯಾ ವಿರುದ್ಧ ಕಿಡಿಕಾರಿದ ಅವ್ರು ಈವಾಗ್ಲೇ ನಿಮ್ಮ ಅಧ್ಯಕ್ಷ ಪುಟಿನ್‌ಗೆ ಕಾಲ್‌ ಮಾಡಿ ಯುದ್ಧ ನಿಲ್ಲಿಸಲು ಹೇಳಿ ಅಂತ ಕೇಳಿಕೊಂಡ್ರು. ಜೊತೆಗೆ ಕೌನ್ಸಿಲ್‌ನ ಅಧ್ಯಕ್ಷರೂ ಅಗಿರುವ ರಷ್ಯಾ ರಾಯಭಾರಿಗೆ ನಿಮ್ಮಿಂದ ಸರಿಯಾದ ಉತ್ತರ ಕೊಡಲು ಸಾಧ್ಯವಾಗದಿದ್ದರೆ ಈಗಲೇ ಕುರ್ಚಿಯಿಂದ ಕೆಳಗಿಳಿಯಿರಿ ಅಂತ ಆಗ್ರಹಿಸಿದರು. ಇನ್ನು ಇದಕ್ಕೆ ಪ್ರತಿಕ್ರಿಯಿಸಿದ ವಾಸಿಲಿ ಇದನ್ನ ಯುದ್ಧ ಅನ್ನಲ್ಲ, ರಷ್ಯಾ ಒಂದು ವಿಶೇಷ ಮಿಲಿಟರಿ ಕಾರ್ಯಾಚರಣೆಯನ್ನ ನಡೆಸ್ತಾ ಇದೆ ಅಂದ್ರು.
– ಇನ್ನು ಇದೇ ಸಂದರ್ಭದಲ್ಲಿ ಮಾತನಾಡಿದ ಭಾರತದ ಯುಎನ್‌ ರಾಯಭಾರಿ ಟಿಎಸ್‌ ತಿರುಮೂರ್ತಿ ಪರಿಸ್ಥಿತಿ ಕೈ ಮೀರಿ ದೊಡ್ಡ ಬಿಕ್ಕಟ್ಟಾಗಿ ಪರಿಣಮಿಸುವಂತೆ ಕಾಣುತ್ತಿದೆ ತಕ್ಷಣವೇ ಡಿಎಸ್ಕಲೇಷನ್‌ ಆಗ್ಬೇಕು ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply