ಬೆಂಗಳೂರಿನಲ್ಲಿ ಬೀದಿಬದಿ ಅಂಗಡಿಗಳ ತೆರವು, ಶಾಕ್‌ನಿಂದ ವ್ಯಾಪಾರಿ ಸಾವು!

masthamagaa.com:

ಬೆಂಗಳೂರು ನಗರದಲ್ಲಿ ಮೂರು ದಿನಗಳಿಂದ ಬೀದಿಬದಿಯ ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸೊ ಕೆಲಸಕ್ಕೆ BBMP ಕೈ ಹಾಕಿದೆ. ಕೆಂಗೇರಿ ಉಪನಗರ, ಮಲ್ಲೇಶ್ವರಂ, ಜಯನಗರ, ಮಡಿವಾಳ ಮಾರ್ಕೆಟ್‌ಗಳಲ್ಲಿ ಜೆಸಿಬಿ ಮೂಲಕ ಅಧಿಕಾರಿಗಳು ಅಂಗಡಿಗಳನ್ನು ತೆರವುಗೊಳಿಸಿದ್ದಾರೆ. ಜಯನಗರದಲ್ಲಿ ತೆರವು ಕಾರ್ಯಾಚರಣೆ ವೇಳೆ ವ್ಯಾಪಾರಿಯೊಬ್ರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. 49 ವರ್ಷದ ಕೃಷ್ಣ ಅನ್ನೊ ವ್ಯಕ್ತಿ ವ್ಯಾಪಾರಕ್ಕೆ ಅವಕಾಶ ಸಿಗದ ಹಿನ್ನಲೆಯಲ್ಲಿ ಹತಾಶರಾಗಿ ಹೃದಯಾಘಾತಕ್ಕೆ ಒಳಗಾಗಿದ್ದಾರೆ. ಅಂದ್ಹಾಗೆ ನಗರದಾದ್ಯಂತ ಸುಮಾರು 200 ಅನಧಿಕೃತ ಮಳಿಗೆಗಳನ್ನ ತೆರವುಗೊಳಿಸ್ಲಾಗಿದೆ ಅಂತ ಉಸ್ತುವಾರಿ ಅಧಿಕಾರಿ ಸೋಮಶೇಖರ್ ಹೇಳಿದ್ದಾರೆ. ಈ ಬಗ್ಗೆ 6 ತಿಂಗಳ ಹಿಂದೆ ವ್ಯಾಪಾರಿಗಳಿಗೆ ತೆರವುಗೊಳಿಸುವಂತೆ ಹೇಳಿ, 3 ತಿಂಗಳ ಹಿಂದೆ ವಾರ್ನಿಂಗ್‌ ನೀಡಿ, ನವೆಂಬರ್‌ 4 ರಂದು ತೆರೆದ ಮೈಕ್‌ ಬಳಸಿ ಅಂಗಡಿ ತೆರವುಗೊಳಿಸೋದಾಗಿ ಅನೌನ್ಸ್‌ ಮಾಡಲಾಗಿತ್ತು ಅಂತ ಸೋಮಶೇಖರ್‌ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply