ನಿಲ್ಲದ ಸುಡಾನ್‌ ಸಂಘರ್ಷ!‌ ವಿಫಲವಾಯ್ತಾ ಅಮೆರಿಕ ಮತ್ತು ಸೌದಿ ಮಧ್ಯಸ್ಥಿಕೆ!

masthmagaa.com:

ಅಧಿಕಾರಕ್ಕಾಗಿ ಸುಡಾನ್‌ನಲ್ಲಿ ನಡೆಯುತ್ತಿರೋ ಅಲ್ಲಿನ ಸೇನೆ ಹಾಗೂ ಅರೆಸೇನಾಪಡೆಗಳ ನಡುವಿನ ಯುದ್ಧ ಇನ್ನಷ್ಟು ತೀವ್ರಗೊಂಡಿದೆ. ಈ ಎರಡೂ ಸೇನೆಗಳ ನಡುವಿನ ಯುದ್ಧ 12ನೇ ವಾರಕ್ಕೆ ಕಾಲಿಟ್ಟಿದ್ದು, ಶಾಂತಿ ಸ್ಥಾಪಿಸೋ ಯಾವುದೇ ಪ್ರಯತ್ನಗಳು ಸಕ್ಸಸ್‌ ಆಗಿಲ್ಲ. ಸುಡಾನ್‌ ರಾಜಧಾನಿ ಖಾರ್ಟೂಮ್‌ನಲ್ಲಿ ವೈಮಾನಿಕ, ಶಸ್ತ್ರಾಸ್ತ್ರ ಸೇರಿದಂತೆ ದಾಳಿ ಹಾಗೂ ಪ್ರತಿದಾಳಿಗಳು ಮುಂದುವರೆದಿವೆ. ಜೊತೆಗೆ ಅರೆಸೇನಾಪಡೆ ತನ್ನ ದಾಳಿಯನ್ನ ಇನ್ನಷ್ಟು ತೀವ್ರಗೊಳಿಸೋಕೆ ಯುದ್ಧವಿಮಾನಗಳು ಹಾಗೂ ಡ್ರೋನ್‌ಗಳನ್ನ ಸಂಗ್ರಹಿಸುತ್ತಿದೆ ಅಂತ ಮಾಹಿತಿ ಲಭ್ಯವಾಗಿದೆ. ಇತ್ತ ಯುದ್ಧದ ಭೀಕರತೆ ಬಗ್ಗೆ ಮಾತಾಡಿರೋ ಸ್ಥಳೀಯರೊಬ್ರು, ದಿನದಿನಕ್ಕೆ ಹೆಚ್ಚಾಗ್ತಿರೋ ದಾಳಿಗಳಿಂದ ನಾವು ಭಯಭೀತರಾಗಿದ್ದೇವೆ ಅಂತ ತಮ್ಮ ಅಳಲನ್ನ ತೋಡಿಕೊಂಡಿದ್ದಾರೆ. ಮತ್ತೊಂದ್‌ ಕಡೆ ಅರೆಸೇನಾಪಡೆ ವಿರುದ್ಧ ಹೋರಾಡೋಕೆ ಸೇನೆಗೆ ಯುವಕರನ್ನ ನೇಮಕ ಮಾಡಿಕೊಳ್ಳಲು ಸೇನಾ ಮುಖ್ಯಸ್ಥ ಅಬ್ದೆಲ್ ಫತ್ತಾಹ್ ಅಲ್ ಕರೆ ನೀಡಿದ್ದು, ಈ ಕುರಿತು ಪೋಸ್ಟ್‌ ಮಾಡಿದ್ದಾರೆ. ಅಂದ್ಹಾಗೆ ಶಾಂತಿ ಮಾತುಕತೆ ಮೂಲಕ ಯುದ್ಧವನ್ನ ಕೊನೆಗೊಳಿಸೋಕೆ ಮಧ್ಯಸ್ಥಿಕೆ ವಹಿಸಿದ್ದ ಸೌದಿ ಅರೇಬಿಯಾ ಹಾಗೂ ಅಮೆರಿಕದ ಪ್ರಯತ್ನಗಳು ವಿಫಲವಾಗಿದ್ದು, ಸುಡಾನ್‌ ಸಂಘರ್ಷ ಮುಂದುವರೆದಿದೆ.

-masthmagaa.com

Contact Us for Advertisement

Leave a Reply