ತೈವಾನ್‌ ಭೂಕಂಪ! ಮೃತಪಟ್ಟವರ ಸಂಖ್ಯೆ 9ಕ್ಕೆ ಏರಿಕೆ!

masthmagaa.com:

ತೈವಾನ್‌ನಲ್ಲಿ ಸಂಭವಿಸಿರೋ ಪ್ರಬಲ ಭೂಕಂಪಕ್ಕೆ ಇದುವರೆಗೆ 9 ಮಂದಿ ಮೃತಪಟ್ಟಿರೋದು ಕನ್ಫರ್ಮ್‌ ಆಗಿದೆ. ಜೊತೆಗೆ 900ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು…ಹಲವರು ಸಿಲುಕಿಕೊಂಡಿದ್ದಾರೆ. ಇವ್ರ ಶೋಧ ಮತ್ತು ರಕ್ಷಣಾ ಕಾರ್ಯಚರಣೆಗಳು ನಡೀತಿವೆ. ಅಲ್ದೇ ಗುಡ್ಡಗಾಡು ಪ್ರದೇಶದಲ್ಲಿ ಕನಿಷ್ಠ 9 ಕಡೆಗಳಲ್ಲಿ ಭೂಕಂಪ ಪರಿಣಾಮ ಭೂಕುಸಿತ ಉಂಟಾಗಿರೋದು ವರದಿಯಾಗಿದೆ. ಇನ್ನು ಸಾವು-ನೋವಿನ ಸಂಖ್ಯೆಗಳು ಇನ್ನಷ್ಟು ಏರಿಕೆಯಾಗೋ ಸಾಧ್ಯತೆಗಳಿವೆ ಎನ್ನಲಾಗ್ತಿದೆ.

-masthmagaa.com

Contact Us for Advertisement

Leave a Reply