ಬೈಡೆನ್​​​​​ ಭೇಟಿಗೂ ಮುನ್ನ ಪುಟಿನ್ ಹೊಸ ಕಿರಿಕ್!

masthmagaa.com:

ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಭೇಟಿಯಾಗೋ ಮುನ್ನವೇ ರಷ್ಯಾ ಅಧ್ಯಕ್ಷ ಪುಟಿನ್ ಚೋಕ್ ಕೊಟ್ಟಿದ್ದಾರೆ. ಇಂಟರ್​ನ್ಯಾಷನಲ್ ಓಪನ್ ಸ್ಕೈಸ್ ಟ್ರೀಟಿ ಅಂದ್ರೆ ಅಂತಾರಾಷ್ಟ್ರೀಯ ಮುಕ್ತ ಆಕಾಶ ಒಪ್ಪಂದದಿಂದ ಹೊರಹೋಗೋ ನಿರ್ಧಾರ ಮಾಡಿದ್ದಾರೆ. ಮುಂದಿನ 6 ತಿಂಗಳಲ್ಲಿ ಈ ಒಪ್ಪಂದಿಂದ ರಷ್ಯಾವನ್ನು ಹೊರತರುವ ಮಸೂದೆಯೊಂದಕ್ಕೆ ಸಹಿ ಹಾಕಿದ್ದಾರೆ. ಅಮೆರಿಕ, ರಷ್ಯಾ ಮತ್ತು ಪಾಶ್ಚಿಮಾತ್ಯ ದೇಶಗಳ ನಡುವೆ ಆಗಿದ್ದ ಈ ಒಪ್ಪಂದದ ಪ್ರಕಾರ ಈ ದೇಶಗಳ ಒಳಗಿನ ಮಿಲಿಟರಿ ಚಟುವಟಿಕೆ, ಸೇನಾ ನೆಲೆ ಮೇಲೆ ಬೇರೆ ದೇಶಗಳು ಕಣ್ಣಿಡಲು ಅವಕಾಶ ನೀಡಲಾಗಿತ್ತು. 2002ರಲ್ಲಿ ಆಗಿದ್ದ ಈ ಒಪ್ಪಂದದಂತೆ ಈವರೆಗೆ ಸುಮಾರು 1,500 ವಿಮಾನಗಳು ಈ ರೀತಿ ಬೇರೆ ದೇಶಗಳಲ್ಲಿ ಹಾರಾಟ ನಡೆಸಿ, ಮಿಲಿಟರಿ ಚಟುವಟಿಕೆ ಮೇಲೆ ಕಣ್ಣಿಟ್ಟಿದ್ವು. ಇದ್ರಿಂದ ಈ ದೇಶಗಳ ಮಿಲಿಟರಿ ಕ್ಷೇತ್ರದಲ್ಲಿ ತಕ್ಕಮಟ್ಟಿಗೆ ಪಾರದರ್ಶಕತೆ, ಜೊತೆಗೆ ಶಸ್ತ್ರಾಸ್ತ್ರ ನಿಯಂತ್ರಣ ಕೂಡ ಸಾಧ್ಯವಾಗಿತ್ತು. ಆದ್ರೆ ಕಳೆದ ವರ್ಷ ರಷ್ಯಾ ನಿರಂತರವಾಗಿ ಈ ಒಪ್ಪಂದ ಉಲ್ಲಂಘಿಸ್ತಾ ಇದೆ ಅಂತ ಆರೋಪಿಸಿ ಡೊನಾಲ್ಡ್​ ಟ್ರಂಪ್ ಅಮೆರಿಕವನ್ನು ಈ ಒಪ್ಪಂದದಿಂದ ಹೊರತಂದಿದ್ರು. ಇದಕ್ಕೆ ಆಗ ಬೈಡೆನ್ ವಿರೋಧ ವ್ಯಕ್ತಪಡಿಸಿದ್ರು. ಇದೊಂದು ದೂರದೃಷ್ಟಿ ಇಲ್ಲದ ನಿರ್ಧಾರ ಅಂತ ಟೀಕಿಸಿದ್ರು. ರಷ್ಯಾ ಕೂಡ ಅಮೆರಿಕ ಈ ಒಪ್ಪಂದದಲ್ಲಿ ಉಳಿಯೋದಾದ್ರೆ ನಾವು ಉಳಿಯುತ್ತೇವೆ ಅಂತ ಹೇಳಿತ್ತು. ಆದ್ರೆ ಬೈಡೆನ್ ಅಧಿಕಾರಕ್ಕೆ ಬಂದು ಐದಾರು ತಿಂಗಳಾದ್ರೂ ಇನ್ನೂ ಈ ಬಗ್ಗೆ ಅಂತಿಮ ನಿರ್ಧಾರ ತಗೊಂಡಿಲ್ಲ. ಹೀಗಾಗಿ ಈ ಒಪ್ಪಂದದಿಂದ ಹೊರಬಂದಿದ್ಧಾರೆ ಪುಟಿನ್. ಇದು ಜೂನ್ 16ರಂದು ನಡೆಯಲಿರೋ ಬೈಡೆನ್, ಪುಟಿನ್ ಮಾತುಕತೆ ಮೇಲೆ ಯಾವ ರೀತಿ ಪರಿಣಾಮ ಬೀರುತ್ತೆ ಅಂತ ಕಾದು ನೋಡಬೇಕು.

-masthmagaa.com

Contact Us for Advertisement

Leave a Reply