ED ನಿರ್ದೇಶಕರಾಗಿ ಸಂಜಯ್‌ ಕುಮಾರ್‌ ಮಿಶ್ರಾ ಮುಂದುವರಿಕೆ: ಸುಪ್ರೀಂಕೋರ್ಟ್‌

masthmagaa.com:

ಸಂಜಯ್‌ ಕುಮಾರ್‌ ಮಿಶ್ರಾ ಅವ್ರನ್ನ ED ನಿರ್ದೇಶಕರಾಗಿ ಸೆಪ್ಟಂಬರ್‌ 15ರವರೆಗೆ ಮುಂದುವರೆಸೋಕೆ ಸುಪ್ರೀಂಕೋರ್ಟ್‌ ಅನುಮತಿ ನೀಡಿದೆ. ದೇಶದ ಹಿತಾಸಕ್ತಿ ಹಿನ್ನಲೆಯಲ್ಲಿ ಸಂಜಯ್‌ ಅವ್ರ ಅಧಿಕಾರಾವಧಿಯನ್ನ ಅಕ್ಟೋಬರ್‌ 15ರವರೆಗೆ ವಿಸ್ತರಿಸುವಂತೆ ಕೋರಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಹೀಗಾಗಿ ಕೇಂದ್ರದ ಅರ್ಜಿಯನ್ನ ರಾಷ್ಟ್ರದ ಹಿತಾಸಕ್ತಿಯಿಂದ ಎಂದು ಪರಿಗಣಿಸಲಾಗಿದೆ ಅಂತ ಸುಪ್ರೀಂ ಕೋರ್ಟ್‌ ಹೇಳಿದೆ. ಅಂದ್ಹಾಗೆ ಜುಲೈ 11ರಂದು ಮಿಶ್ರಾ ಅವಧಿ ವಿಸ್ತರಣೆ ಕಾನೂನು ಬಾಹಿರ ಅಂತ ಸುಪ್ರೀಂ ಕೋರ್ಟ್ ಘೋಷಿಸಿತ್ತು. ಆದ್ರೆ ಕೆಲವು ನೆರೆ ರಾಷ್ಟ್ರಗಳು ಭಾರತವನ್ನ FATFನ ‘ಗ್ರೇ ಲಿಸ್ಟ್’ಗೆ ಸೇರಿಸಬೇಕು ಅಂತ ಬಯಸುತ್ತಿವೆ. ಆದ್ದರಿಂದ ED ಮುಖ್ಯಸ್ಥರಾಗಿ ಮಿಶ್ರಾ ಮುಂದುವರೆಯುವ ಅಗತ್ಯವಿದೆ ಅಂತ ಕೇಂದ್ರ ಸರ್ಕಾರ ತನ್ನ ವಾದ ಮಂಡಿಸಿದೆ.

-masthmagaa.com

Contact Us for Advertisement

Leave a Reply