ED, CBI ಹಾಗೂ ವಿಪಕ್ಷಗಳ ಆಢಳಿತ ಇರೋ ಸರ್ಕಾರಗಳ ಗೋಜಲು!

masthmagaa.com:

ಬಿಜೆಪಿಯೇತರ ರಾಜ್ಯ ಸರ್ಕಾರಗಳು ಹಾಗೂ CBI, ED ನಡುವೆ ಹಲವು ಕೇಸ್‌ಗಳಲ್ಲಿ ಕ್ಲಾಶ್‌ ಆಗೋದ್ರ ಬಗ್ಗೆ ಸುಪ್ರೀಂ ಕೋರ್ಟ್‌ ಕಳವಳ ವ್ಯಕ್ತಪಡಿಸಿದೆ. ಅಲ್ಲದೆ ಈ ಘರ್ಷಣೆಗಳನ್ನ ಎಂಡ್‌ ಮಾಡೋಕೆ ಸಲಹೆ ನೀಡಿ ಅಂತ ಕೋರ್ಟ್‌ ಕೇಳಿದೆ. ನ್ಯಾಯೋಚಿತ ಹಾಗೂ ಪಾರದರ್ಶಕ ತನಿಖೆಗಳು ಆಗೋಕೆ ಒಂದೊಳ್ಳೇ ಕಾರ್ಯತಂತ್ರ ರೂಪಿಸ್ಬೇಕು. ತನಿಖೆಯಲ್ಲಿ ಯಾವುದೇ ರೀತಿಯ ಅಕ್ರಮ ಅಥ್ವಾ ರಾಜಕೀಯ ಸೇಡು ಇರ್ಬಾರ್ದು. ತನಿಖಾ ಸಂಸ್ಥೆಗಳ ಕ್ಲಾಶ್‌ ಆಗದಂತೆ ಕಾನೂನು ರೂಪಿಸೋಕೆ ಐಡಿಯಾ ಕೊಡಿ ಅಂತ ಸುಪ್ರೀಂ ಕೋರ್ಟ್‌ ಕೇಳಿದೆ. ಇತ್ತೀಚೆಗೆ ಪಶ್ಚಿಮ ಬಂಗಾಳದಲ್ಲಿ ED ಹಾಗೂ CBI ಅಧಿಕಾರಿಗಳ ಕಾರನ್ನ ಒಂದಷ್ಟು ಜನ ಅಡ್ಡಗಟ್ಟಿ ಅಧಿಕಾರಿಗಳಿಗೆ ತಳಿಸಿದ್ರು. ಈ ಕೇಸ್‌ನ ತನಿಖೆಯಲ್ಲಿ ವೆಸ್ಟ್‌ ಬೆಂಗಾಲ್‌ ಸರ್ಕಾರ ಕೋಅಪರೇಟ್‌ ಮಾಡ್ತಿಲ್ಲ ಅಂತ ಸಂಸ್ಥೆಗಳು ಆರೋಪಿಸಿದ್ವು. ಇನ್ನೊಂದು ಕೇಸ್‌ನಲ್ಲಿ ತಮಿಳುನಾಡು ಸರ್ಕಾರದ ಅಧಿಕಾರಿಗಳು, ED ಅಧಿಕಾರಿಗಳ ಮೇಲೆ ರೇಡ್‌ ನಡೆಸಿ ಹಲವಾರು ಧಾಖಲೆಗಳನ್ನ ವಶಪಡಿಸಿಕೊಂಡಿದ್ರು. ಲಂಚದ ಕಾರಣ ನೀಡಿ ತಮಿಳು ನಾಡು ಸರ್ಕಾರ ಈ ರೇಡ್‌ ನಡೆಸಿತ್ತು. ಆಗ ವಶಪಡಿಸಿಕೊಂಡಿದ್ದ ದಾಖಲೆಗಳು ತಮಿಳುನಾಡಿನ ರಾಜ್ಯ ಸಚಿವರಿಗೆ ಸಂಬಂಧಿಸಿದ್ವು ಅಂತ ED ವಾದ ಮುಂದಿಟ್ಟಿದೆ. ಅತ್ತ ಕೆಲವು ಸೀನಿಯರ್‌ ಲಾಯರ್‌ಗಳು ತನಿಖಾ ಸಂಸ್ಥೆಗಳ ಅರ್ಜಿಯ ವಿರುದ್ಧ ವಾದ ಮಂಡಿಸಿದ್ದಾರೆ. ED ಹಾಗೂ CBI ಪಕ್ಷಪಾತದಿಂದ ಕೆಲಸ ಮಾಡ್ತಿವೆ. ಬೇಕಂತ್ಲೆ ಕೆಲವರನ್ನ ಟಾರ್ಗೆಟ್‌ ಮಾಡ್ತಿವೆ. ಬಹಳ ಸೆಲೆಕ್ಟಿವ್‌ ಆಗಿ ರೇಡ್‌ಗಳನ್ನ ನಡೆಸುತ್ವೆ ಅಂತ ಆರೋಪಿಸಿದ್ದಾರೆ. ಸೊ ಇದೀಗ ಸುಪ್ರಿಂ ಇಂತಹಾ ಕ್ಲಾಶ್‌ಗಳಿಗೆ ಕಡಿವಾಣ ಹಾಕೋಕೆ ಮುಂದಾಗಿದೆ.

-masthmagaa.com

Contact Us for Advertisement

Leave a Reply