ರೋಹಿಣಿ ಸಿಂಧೂರಿ ವಿರುದ್ಧದ ಪೋಸ್ಟ್‌ ಡಿಲೀಟ್‌ ಮಾಡೋಕೆ ಡಿ ರೂಪಗೆ ಸುಪ್ರೀಂ ಗಡುವು!

masthmagaa.com:

IAS ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿನ ಪೋಸ್ಟ್‌ಗಳನ್ನ ಡಿಲೀಟ್‌ ಮಾಡೋಕೆ ಸುಪ್ರೀಂ ಕೋರ್ಟ್‌ IPS ಅಧಿಕಾರಿ ಡಿ ರೂಪಾಗೆ ಗಡುವು ಕೊಟ್ಟಿದೆ. ರೋಹಿಣಿ ಸಿಂಧೂರಿ, ರೂಪ ವಿರುದ್ಧ ಮಾನನಷ್ಟ ಮೊಕದ್ದಮೆ ಸಲ್ಲಿಸಿದ್ರು. ಈ ಅರ್ಜಿ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌ ಡಿ. ರೂಪಾಗೆ ನಿರ್ದೇಶನ ನೀಡಿದೆ. 24 ಗಂಟೆ ಒಳಗೆ ಎಲ್ಲಾ ಪೋಸ್ಟ್‌ಗಳು ಡಿಲೀಟ್‌ ಆಗ್ಬೇಕು. ಇಲ್ಲ ಅಂದ್ರೆ ಎಲ್ಲಾ ಕಾಮೆಂಟ್‌ಗಳನ್ನ, ಹೇಳಿಕೆಗಳನ್ನ ವಾಪಸ್‌ ಪಡಿತೀನಿ ಅಂತೇಳಿ ಇನ್ನೊಂದು ಪೋಸ್ಟ್‌ ಹಾಕಿ ಅಂತ ಸುಪ್ರೀಂ ಕೋರ್ಟ್‌ ಸೂಚನೆ ನೀಡಿದೆ. ಅಂದ್ಹಾಗೆ ಕೋರ್ಟ್‌ ಮಧ್ಯಸ್ಥಿಕೆಯಲ್ಲಿ ವಿವಾದ ಬಗೆಹರಿಸ್ಕೊಳ್ಳಿ ಅಂತ ಕೋರ್ಟ್‌ ಈ ಇಬ್ಬರು ಅಧಿಕಾರಿಗಳಿಗೆ ಬುಲಾವ್‌ ನೀಡಿತ್ತು. ಆದ್ರೆ ಸಂಧಾನ ಫೇಲ್‌ ಆಗಿ ಸುಪ್ರೀಂ ಕೋರ್ಟ್‌ ಅಧಿಕಾರಿಗಳ ನಡೆಯ ಬಗ್ಗೆ ಬೇಸರ ವ್ಯಕ್ತಪಡಿಸಿದೆ.

-masthmagaa.com

Contact Us for Advertisement

Leave a Reply