ಚಂಡೀಗಢ ಮೇಯರ್‌ ಎಲೆಕ್ಷನ್‌ನಲ್ಲಿ ಅಕ್ರಮ: ಸುಪ್ರಿಂ ಛೀಮಾರಿ

masthmagaa.com:

ಚಂಡೀಗಢ ಮೇಯರ್‌ ಎಲೆಕ್ಷನ್‌ನಲ್ಲಿ ಅಕ್ರಮ ನಡೆದಿರೋ ಬಗ್ಗೆ ಸುಪ್ರೀಂ ಕೋರ್ಟ್‌ ಚುನಾವಣೆ ಮೇಲ್ವಿಚಾರಣೆ ಅಧಿಕಾರಿಗೆ ಛೀಮಾರಿ ಹಾಕಿದೆ. ಅಲ್ಲದೆ ಪಾಲಿಕೆಯ ಮೀಟಿಂಗನ್ನ ಅನಿರ್ದಿಷ್ಟಾವಧಿಗೆ ಮುಂದೂಡಿದೆ. AAP ಕೌನ್ಸೆಲರ್‌ ಕುಲ್ದೀಪ್‌ ಕುಮಾರ್‌ ಚುನಾವಣೆಯಲ್ಲಿ ಅಕ್ರಮ ನಡಿದಿದೆ. ಚುನಾವಣಾಧಿಕಾರಿ ಅನಿಲ್‌ ಮಸಿಹ್‌ ಅಕ್ರಮ ಎಸಗಿದ್ದಾರೆ ಅಂತ ಆರೋಪಿಸಿದ್ರು. ಈ ರಿಸಲ್ಟನ್ನ ರದ್ದು ಮಾಡಿ, ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಮರುಚುನಾವಣೆ ನಡೀಬೇಕು ಅಂತ ಅರ್ಜಿ ಸಲ್ಲಿಸಿದ್ರು. ಸುಪ್ರಿಂ ಕೋರ್ಟ್‌ನಲ್ಲಿ ವಿಚಾರಣೆ ವೇಳೆ ಚುನಾವಣಾ ಬೂತ್‌ನ ವಿಡಿಯೋ ಫುಟೇಜನ್ನ CJI ಡಿವೈ ಚಂದ್ರಚೂಡ್‌ ಪರಿಶೀಲಿಸಿದ್ದಾರೆ. ಈ ವೇಳೆ ಅಕ್ರಮ ನಡೆದಿರೋದು ನಿಜ. ಅನಿಲ್‌ ಮಸಿಹ್‌ ಬ್ಯಾಲೆಟ್‌ ಪೇಪರ್‌ಗಳನ್ನ ವಿರೂಪಗೊಳಿಸಿದ್ದಾರೆ. ಆತನ ವಿರುದ್ಧ ಕ್ರಮ ತಗೊಳ್ಬೇಕು. ಇದು ಪ್ರಜಾಪ್ರಭುತ್ವದ ಅಪಹಾಸ್ಯ ಹಾಗೂ ಕಗ್ಗೊಲೆʼ ಅಂತ ಛೀಮಾರಿ ಹಾಕಿದ್ದಾರೆ. ಅಂದ್ಹಾಗೆ ಚಂಡೀಗಢ ಮೇಯರ್‌ ಎಲೆಕ್ಷನ್‌ನಲ್ಲಿ ನಿಜೆಪಿಯ ಮನೋಜ್‌ ಸೊಂಕರ್‌ ಆಪ್‌ನ ಕುಲ್ಡೀಪ್‌ ಕುಮಾರ್‌ ವಿರುದ್ಧ 4 ವೋಟ್‌ಗಳ ಲೀಡ್‌ನಲ್ಲಿ ಜಯಿಸಿದ್ರು. ಇದೀಗ ಈ ಎಲೆಕ್ಷನ್‌ನಲ್ಲಿ ಅಕ್ರಮ ಆಗಿರೋದು ಸಾಬೀತಾಗಿದೆ. ಫೆಬ್ರವರಿ 12ಕ್ಕೆ ಮುಂದಿನ ವಿಚಾರಣೆಯನ್ನ ಫಿಕ್ಸ್‌ ಮಾಡಲಾಗಿದೆ.

-masthmagaa.com

Contact Us for Advertisement

Leave a Reply