‘ಸೆಕ್ಸ್‌ ವರ್ಕರ್‌’ ಪದಕ್ಕೆ ಸುಪ್ರೀಂ ತಿದ್ದುಪಡಿ!

masthmagaa.com:

ಸುಪ್ರೀಂ ಕೋರ್ಟ್‌ ತನ್ನ ʻgender stereotypesʼ ಕೈಪಿಡಿಯಲ್ಲಿ `ಸೆಕ್ಸ್‌ ವರ್ಕರ್‌ʼ ಅಥ್ವಾ ಲೈಂಗಿಕ ಕಾರ್ಯಕರ್ತೆ ಅನ್ನೊ ಪದಕ್ಕೆ ಪರ್ಯಾಯ ಪದವೊಂದನ್ನ ಸೇರಿಸೋ ತಿದ್ದುಪಡಿ ಮಾಡುವುದಾಗಿ ಹೇಳಿದೆ. ಈ ವರ್ಷದ ಆಗಸ್ಟ್‌ನಲ್ಲಿ ಸುಪ್ರೀಂ ಕೋರ್ಟ್ Handbook on Combating Gender Stereotypes‌ ಅನ್ನೊ ಕೈಪಿಡಿಯನ್ನ ಪ್ರಕಟಿಸಿತ್ತು. ಇದರಲ್ಲಿ ಬಳಸಿರೋ ಸೆಕ್ಸ್‌ ವರ್ಕರ್‌ ಅನ್ನೊ ಪದವನ್ನ ಮಾನವ ಕಳ್ಳಸಾಗಾಣಿಕೆಗೆ ಬಲಿಯಾಗಿರೊ ಅಥ್ವಾ ತಪ್ಪಿಸಿಕೊಂಡಿರೊ ಮಹಿಳೆಯರನ್ನ ಸೂಚಿಸುವಾಗ ಬಳಸಬಾರದು. ಜೊತೆಗೆ ವಾಣಿಜ್ಯ ಲೈಂಗಿಕ ಚಟುವಟಿಕೆಗಳಲ್ಲಿ ಪಾಲ್ಗೊಂಡಿರೊ ಹಾಗೂ ಬಲವಂತವಾಗಿ ಆ ಕೆಲಸಕ್ಕೆ ತಳ್ಳಲ್ಪಟ್ಟಿರೊ ಮಹಿಳೆಯರನ್ನೂ ಅಡ್ರೆಸ್‌ ಮಾಡುವಾಗ ಆ ಪದವನ್ನ ಉಪಯೋಗಿಸಬಾರ್ದು ಅಂತ NGOಗಳ ತಂಡವೊಂದು CJI ಡಿ.ವೈ. ಚಂದ್ರಚೂಡ್‌ಗೆ ಅವರಿಗೆ ಮನವಿ ಮಾಡಿತ್ತು. ಹೀಗಾಗಿ ಆ ಪದದ ಬದಲಾಗಿ ತಾರತಮ್ಯವಿಲ್ಲದ ಬೇರೆ ಪದವನ್ನ ಉಪಯೋಗಿಸಲಾಗತ್ತೆ ಅಂತ ಕೋರ್ಟ್‌ ಹೇಳಿದೆ.

-masthmagaa.com

Contact Us for Advertisement

Leave a Reply