ಸಲಿಂಗ ವಿವಾಹ! ಸುಪ್ರೀಂ ಬಿಗ್‌ ಡಿಸಿಷನ್‌!

masthmagaa.com:

ದೇಶದಲ್ಲಿ ಭಾರಿ ಸದ್ದು ಮಾಡಿದ್ದ ಸಲಿಂಗ ವಿವಾಹಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ ಇಂದು ತನ್ನ ತೀರ್ಪನ್ನ ಪ್ರಕಟಿಸಿದೆ. ಈ ವೇಳೆ ಸಲಿಂಗ ವಿವಾಹವನ್ನ ಕಾನೂನುಬದ್ಧಗೊಳಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳನ್ನ 3:2 ಮತದಿಂದ ತಿರಸ್ಕರಿಸಲಾಗಿದೆ. ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್‌ ನೇತೃತ್ವದ ಐವರು ನ್ಯಾಯಾಧೀಶರ ಪೀಠ, ಸಲಿಂಗ ದಂಪತಿಗಳಿಗೆ ಮದುವೆಯಾಗುವ ಅಥವಾ ಒಟ್ಟಾಗಿ ಬಾಳುವ ಹಕ್ಕನ್ನ ಕಾನೂನು ಗುರುತಿಸಲ್ಲ ಅಂತ ಹೇಳಿದೆ. ಜೊತೆಗೆ ಕಾನೂನು ರೂಪಿಸುವುದು ಸಂಸತ್‌ಗೆ ಬಿಟ್ಟದ್ದು ಅಂತ ಸುಪ್ರೀಂಕೋರ್ಟ್ ಸೂಚಿಸಿದೆ. ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಎಸ್ ರವೀಂದ್ರ ಭಟ್, ಹಿಮಾ ಕೊಹ್ಲಿ ಮತ್ತು ಪಿ ಎಸ್ ನರಸಿಂಹ ಪೀಠದ ಇತರ ಸದಸ್ಯರಾಗಿದ್ದರು. ನ್ಯಾಯಮೂರ್ತಿಗಳಾದ ಚಂದ್ರಚೂಡ್ ಮತ್ತು ಕೌಲ್ ಅವರು ಸಲಿಂಗ ವಿವಾಹವನ್ನ ಕಾನೂನುಬದ್ಧಗೊಳಿಸುವ ಮನವಿಯನ್ನ ಬೆಂಬಲಿಸಿದರೆ, ಇತರ ಮೂವರು ನ್ಯಾಯಾಧೀಶರು ಅದನ್ನ ತಿರಸ್ಕರಿಸಿದ್ದಾರೆ.

ತೀರ್ಪಿನಲ್ಲಿ ಐವರು ನ್ಯಾಯಮೂರ್ತಿಗಳು ಒಕ್ಕೊರಲಾಗಿ ಸಂವಿಧಾನದಲ್ಲಿ ಮದುವೆಯಾಗಲು ಯಾವುದೇ ಮೂಲಭೂತ ಹಕ್ಕಿಲ್ಲ ಅಂತ ಹೇಳಿದ್ದಾರೆ. ಇನ್ನು ಅರ್ಜಿ ಸಲ್ಲಿಸಿದವ್ರು ವಿಶೇಷ ವಿವಾಹ ಕಾಯ್ದೆ 1954ಯನ್ನ ಲಿಂಗಸಮಾನ ಅಥವಾ ಜೆಂಡರ್‌ ನ್ಯೂಟ್ರಲ್‌ ಭಾಷೆಯಲ್ಲಿ ಓದಿ ಸಲಿಂಗ ವಿವಾಹಗಳಿಗೆ ಅವಕಾಶ ಮಾಡಿಕೊಡ್ಬೇಕು ಅಂತ ಕೇಳಿದ್ರು. ಪುರುಷ ಮತ್ತು ಮಹಿಳೆ ಅಂತಿರೋದನ್ನ spouses ಅಥವಾ ಸಂಗಾತಿಗಳು ಅಂತ ವ್ಯಾಖ್ಯಾನಿಸಬೇಕು ಅಂತ ಕೇಳಿಕೊಂಡಿದ್ರು. ಆದ್ರೆ CJI ಚಂದ್ರಚೂಡ್‌ ಅವ್ರು ತಮ್ಮ ತೀರ್ಪಿನಲ್ಲಿ, ಆ ರೀತಿ ಮಾಡಿದ್ರೆ ನ್ಯಾಯಾಂಗ ಶಾಸನ ರಚಿಸಿದಂತೆ ಆಗುತ್ತೆ, ನಮ್ಮ ವ್ಯಾಪ್ತಿಯನ್ನ ಮೀರಿದಂತೆ ಆಗುತ್ತೆ. ಹೀಗಾಗಿ ಈ ವಿಚಾರವನ್ನ ಪಾರ್ಲಿಮೆಂಟ್‌ಗೆ ಡಿಸೈಡ್‌ ಮಾಡೋಕೆ ಬಿಡ್ಬೇಕು ಅಂತ ಹೇಳಿದ್ದಾರೆ. ಇನ್ನು ಇದೇ ವೇಳೆ Central Adoption Resources Authority (CARA), LGBTQIA+ ದಂಪತಿಗಳು ಮಕ್ಕಳನ್ನ ದತ್ತು ತೆಗೆದುಕೊಳ್ಳೋಕೆ ತಡೆ ಹೇರಿರೋದು ಅಸಾಂವಿಧಾನಿಕ ಅಂತ ಹೇಳಿದೆ.

-masthmagaa.com

Contact Us for Advertisement

Leave a Reply