ಯುಕ್ರೇನ್​ನಲ್ಲಿದೆ ಮಕ್ಕಳ ಫ್ಯಾಕ್ಟರಿ: ಒಂದು ಮಗುವಿಗೆ 40-42 ಲಕ್ಷ!

masthmagaa.com:

ಈ ಪ್ರಪಂಚದಲ್ಲಿ ದುಡ್ಡು ಕೊಟ್ರೆ ಏನ್ ಬೇಕಾದ್ರೂ ಸಿಗುತ್ತೆ. ಮಕ್ಕಳಿಲ್ಲದವರಿಗೆ ಮಕ್ಕಳು ಕೂಡ ಸಿಗುತ್ತೆ. ಸೆರೋಗಸಿ ಅಂದ್ರೆ ಬೇರೆ ದಂಪತಿಗಾಗಿ ಗರ್ಭ ಧರಿಸಿ, ಮಕ್ಕಳು ಜನಿಸಿದ ಬಳಿಕ ಮಕ್ಕಳನ್ನು ದಂಪತಿಗೆ ವಹಿಸೋದು.. 9 ತಿಂಗಳು ಹೆತ್ತು ಹೊರೋದು ಬೇರೆಯೋರು.. ನಂತರ ಆ ಮಕ್ಕಳ ತಂದೆ-ತಾಯಿಯಾಗಿ ಸಾಕೋರು ಬೇರೆಯೋರು.. ಭಾರತ, ನೇಪಾಳ, ಬಾಂಗ್ಲಾದೇಶ ಸೇರಿದಂತೆ ಹಲವು ದೇಶಗಳಲ್ಲಿ ಇದರ ವಿರುದ್ಧ ಕಠಿಣ ಕಾನೂನುಗಳಿವೆ.. ಆದ್ರೆ ಬ್ರಿಟನ್ ಸೇರಿದಂತೆ ಹಲವು ದೇಶಗಳಲ್ಲಿ ಇದಕ್ಕೆ ಕಾನೂನಿನ ಮಾನ್ಯತೆ ಕೂಡ ಇದೆ. ಆದ್ರೆ ಯುಕ್ರೇನ್​​ನಲ್ಲಿ ಇದನ್ನ ದಂಧೆ ರೀತಿ ನಡೆಸಲಾಗುತ್ತೆ. ಮಕ್ಕಳ ಫ್ಯಾಕ್ಟರಿಗಳೇ ಇವೆ.. ಇಲ್ಲಿ ಸೆರೋಗಸಿ ಅಂದ್ರೆ ಮಕ್ಕಳ ಫ್ಯಾಕ್ಟರಿ ಬಗ್ಗೆ ಪ್ರಮೋಷನ್​​ ವಿಡಿಯೋಗಳು ಪ್ರಸಾರವಾಗುತ್ತೆ. ಜಾಹೀರಾತುಗಳನ್ನು ನೀಡಲಾಗುತ್ತೆ. ಒಂದು ಮಗುವನ್ನು 40ರಿಂದ 42 ಲಕ್ಷ ಕೊಟ್ಟು ಪಡೆದುಕೊಳ್ಳಲು ಅವಕಾಶವಿದೆ. ಈ ರೀತಿ ಗರ್ಭಧರಿಸಿ ಮಕ್ಕಳಿಗೆ ಜನ್ಮ ನೀಡುವವರನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುವಂತೆ ಜಾಹೀರಾತುಗಳಲ್ಲಿ ತೋರಿಸಲಾಗುತ್ತೆ. ಆದ್ರೆ ಅವರ ಅಸಲಿ ಪರಿಸ್ತಿತಿ ತುಂಬಾ ಭಿನ್ನವಾಗಿದೆ ಅಂತ ಇತ್ತೀಚೆಗೆ ಇದೇ ರೀತಿಯ ಒಂದು ಬೇಬಿ ಫ್ಯಾಕ್ಟರಿಯಿಂದ 2 ಅವಳಿ ಮಕ್ಕಳನ್ನು ಪಡೆದಿರೋ ಬ್ರಿಟನ್ ಮೂಲದ ದಂಪತಿ ಹೇಳಿದ್ದಾರೆ. ಮಾಧ್ಯಮವೊಂದಕ್ಕೆ ಈ ಬಗ್ಗೆ ಇಂಟರ್​ ವ್ಯೂ ನೀಡಿರೋ ಅವರು, ಆ ಮಕ್ಕಳ ತಾಯಂದಿರನ್ನು ತುಂಬಾ ಕೆಟ್ಟದಾಗಿ, ಪ್ರಾಣಿಗಳ ರೀತಿ ನಡೆಸಿಕೊಳ್ಳಲಾಗುತ್ತೆ. ಗಲೀಜು ಜಾಗಗಳಲ್ಲಿ ಇರಿಸಲಾಗುತ್ತೆ. ಅವರಿಗೆ ಎಸಿ ಬಿಡಿ.. ಕನಿಷ್ಠ ವ್ಯವಸ್ಥೆಗಳು ಕೂಡ ಇರೋದಿಲ್ಲ. ಶುದ್ಧವಾದ ನೀರು ಕೂಡ ಸಿಗೋದಿಲ್ಲ. ಇಷ್ಟೆಲ್ಲಾ ಕಷ್ಟ ಅನುಭವಿಸಿ, ಮಕ್ಕಳಿಗೆ ಜನ್ಮ ನೀಡಿದ ಬಳಿಕ 10 ಲಕ್ಷ ರೂಪಾಯಿ ನೀಡಿ ಮಗುವನ್ನು ಆಕೆಯಿಂದ ದೂರ ಮಾಡಲಾಗುತ್ತೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply