ಸುಶಾಂತ್ ಸಿಂಗ್ ಮೃತಪಟ್ಟು ಇಂದಿಗೆ 1 ವರ್ಷ!

masthmagaa.com:

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಾಗಿ ಇಂದಿಗೆ 1 ವರ್ಷ. ಕಳೆದ ವರ್ಷ ಜೂನ್ 14ರಂದು ಮುಂಬೈನ ಅವರ ಮನೆಯಲ್ಲಿ ಸುಶಾಂತ್ ಅವರ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಆದ್ರೆ ಇದು ಆತ್ಮಹತ್ಯೆಯೋ, ಕೊಲೆಯೋ ಅನ್ನೋ ಬಗ್ಗೆ ಇನ್ನೂ ತನಿಖೆ ನಡೀತಿದೆ. ಈ ಬಗ್ಗೆ ಮಾತನಾಡಿರೋ ಸಿಬಿಐ ಅಧಿಕಾರಿಯೊಬ್ಬರು, ಈ ಪ್ರಕರಣದ ಎಲ್ಲಾ ಅಂಶಗಳನ್ನ ಸೂಕ್ಷ್ಮವಾಗಿ ಪರಿಶೀಲಿಸಲಾಗುತ್ತಿದೆ ಎಂದಿದ್ದಾರೆ. ಇನ್ನು ಸಿಬಿಐನ ನೂತನ ನಿರ್ದೇಶಕರಾಗಿರೋ ಸುಬೋದ್ ಕುಮಾರ್ ಜೈಸ್ವಾಲ್ ಈ ಪ್ರಕರಣಕ್ಕೆ ಹೆಚ್ಚಿನ ಮಹತ್ವ ನೀಡಿ, ಶೀಘ್ರದಲ್ಲೇ ಚಾರ್ಜ್ಶೀಟ್ ಸಲ್ಲಿಸುತ್ತಾರೆ ಅಂತ ಅಂದುಕೊಂಡಿದ್ದೀವಿ ಅಂತ ಸುಶಾಂತ್ ಕುಟುಂಬ ಪರ ವಕೀಲ ವಿಕಾಸ್ ಸಿಂಗ್ ಹೇಳಿದ್ದಾರೆ. ಜೊತೆಗೆ ಏಮ್ಸ್ನ ವೈದ್ಯರೊಬ್ಬರು ಸುಶಾಂತ್ ಕುತ್ತಿಗೆ ಭಾಗದಲ್ಲಿದ್ದ ಮಾರ್ಕ್ ಕತ್ತುಹಿಸುಕಿದ್ದರಿಂದ ಆಗಿದ್ದು ಎಂದಿದ್ದರು. ಆದ್ರೀಗ ಅವರು ಇದೊಂದು ಆತ್ಮಹತ್ಯೆ ಪ್ರಕರಣ ಅಂತ ಹೇಳ್ತಿದ್ದಾರೆ ಎಂದಿದ್ದಾರೆ.

-masthmagaa.com

Contact Us for Advertisement

Leave a Reply