ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಮ್ಯಾನೇಜರ್‌ ಸಾವು ಆಕಸ್ಮಿಕ: ಸಿಬಿಐ

masthmagaa.com:

ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಅವ್ರ ಮ್ಯಾನೇಜರ್‌ ದಿಶಾ ಸಾಲಿಯಾನ್‌ ಸಾವು ಆಕಸ್ಮಿಕ ಅಂತ ಸಿಬಿಐ ತನಿಖೆಯಲ್ಲಿ ಬಹಿರಂಗವಾಗಿದೆ. ದಿಶಾ ಕುಡಿದ ಮತ್ತಿನಲ್ಲಿ ಟೆರೇಸ್‌ನಿಂದ ಕಂಟ್ರೋಲ್‌ ತಪ್ಪಿ ಬಿದ್ದು ಸಾವನ್ನಪ್ಪಿದ್ದಾರೆ ಅಂತ ಸಿಬಿಐ ಹೇಳಿದೆ. ಅಂದ್ಹಾಗೆ ದಿಶಾ ಸಾವಿಗೂ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಗೂ ಯಾವುದೇ ಸಂಬಂಧವಿಲ್ಲ ಅನ್ನೋದು ಸ್ಪಷ್ಟವಾಗಿದೆ ಎನ್ನಲಾಗಿದೆ. 2020ರ ಜೂನ್‌ 9 ರಂದು ದಿಶಾ ಸಾವನ್ನಪ್ಪಿದ್ರು. ಆ ಬಳಿಕ ಸುಶಾಂತ್ ಸಿಂಗ್ ರಜಪೂತ್ ಅವ್ರ ಶವ 2020ರ ಜೂನ್ 14 ರಂದು ಬಾಂದ್ರಾ ಫ್ಲಾಟ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಇವರ ಇಬ್ಬರ ಸಾವಿಗೆ ಸಂಬಂಧವಿದೆ ಅಂತ ವದಂತಿಗಳು ಹರಡಿದ್ವು. ಇದೀಗ ದಿಶಾ ಸಾವು ಆಕಸ್ಮಿಕ ಅಂತ ಹೇಳಿದೆ. ಆದ್ರೆ ಸುಶಾಂತ್‌ ಸಾವಿನ ತನಿಖೆ ಮಾತ್ರ ಇನ್ನು ಮುಗಿದಿಲ್ಲ.

-masthmagaa.com

Contact Us for Advertisement

Leave a Reply