ರಷ್ಯಾ ದಾಳಿ ಭಯ! ಸೇನೆ ಬಜೆಟ್ ಹೆಚ್ಚಿಸಿದ ಸ್ವೀಡನ್!

masthmagaa.com:

ಯುಕ್ರೇನ್ ರಷ್ಯಾ ಮೇಲೆ ದಾಳಿ ನಡುವೆಯೇ ಸ್ವೀಡನ್ ಕೂಡ ತನ್ನ ರಕ್ಷಣಾ ವೆಚ್ಚವನ್ನು ಡಬಲ್ ಮಾಡೋದಾಗಿ ಘೋಷಿಸಿದೆ. ತನ್ನ ಜಿಡಿಪಿಯ 2 ಪರ್ಸೆಂಟ್​​ನಷ್ಟು ದುಡ್ಡನ್ನು ರಕ್ಷಣೆ ಮೇಲೆ ಸುರಿಯಲು ಪ್ಲಾನ್ ಮಾಡಿದೆ. ಕೋಲ್ಡ್​ ವಾರ್ ಅಂತ್ಯಗೊಂಡ ಬಳಿಕ ಸ್ವೀಡನ್ ಡಿಫೆನ್ಸ್ ಬಜೆಟ್ ದೊಡ್ಡಮಟ್ಟದಲ್ಲಿ ಕಡಿಮೆಯಾಗಿತ್ತು. 2020ರಲ್ಲಿ ಸ್ವೀಡನ್ ಡಿಫೆನ್ಸ್​ ಬಜೆಟ್​ ಜಿಡಿಪಿಯ 1.2 ಪರ್ಸೆಂಟ್​ನಷ್ಟು ಮಾತ್ರ ಇತ್ತು. ಆದ್ರೆ ಇತ್ತೀಚೆಗೆ ರಷ್ಯಾ ಯುಕ್ರೇನ್ ಮೇಲೆ ಆಕ್ರಮಣ ಮಾಡಿದ ಬಳಿಕ ಎಚ್ಚೆತ್ತ ಸ್ವೀಡನ್ ಮತ್ತು ಫಿನ್​ಲ್ಯಾಂಡ್​ನಲ್ಲಿ ನ್ಯಾಟೋ ಸೇರೋ ಕೂಗು ಜಾಸ್ತಿಯಾಗಿತ್ತು. ಇದಕ್ಕೆ ರಷ್ಯಾ ಕೂಡ ನ್ಯಾಟೋ ಸೇರಿದ್ರೆ ಮಿಲಿಟರಿ ಪರಿಣಾಮ ಎದುರಿಬೇಕಾಗುತ್ತೆ ಅಂತ ಎಚ್ಚರಿಸಿತ್ತು. ಅದ್ರ ಬೆನ್ನಲ್ಲೇ ಪ್ರಧಾನಿ ಮಗ್ಡಲೆನಾ ಅಂಡರ್ಸನ್ ಈ ನಿರ್ಧಾರಕ್ಕೆ ಬಂದಿದ್ದಾರೆ.

-masthmagaa.com

Contact Us for Advertisement

Leave a Reply