ವಿಶ್ವಸಂಸ್ಥೆಯ ಏಜೆನ್ಸಿ UNRWAಗೆ ಪುನಃ ಹಣ ಸಹಾಯ!

masthmagaa.com:

ವಿಶ್ವಸಂಸ್ಥೆಯ ರಿಲೀಫ್‌ & ವರ್ಕ್ಸ್‌ ಏಜೆನ್ಸಿ ಅಥ್ವಾ UNRWA ಏಜೆನ್ಸಿಗೆ ಹಣ ಸಹಾಯ ಮಾಡೋಕೆ ಸ್ವೀಡನ್‌ ಮತ್ತು ಕೆನಡಾ ಪುನಃ ಮುಂದಾಗಿದೆ. ಇದೀಗ ಈ ಏಜೆನ್ಸಿಗೆ ಆರಂಭದಲ್ಲಿ 19 ಮಿಲಿಯನ್‌ ಡಾಲರ್‌ ಅಂದ್ರೆ ಸುಮಾರು 157.7 ಕೋಟಿ ರೂಪಾಯಿ ನೀಡ್ತೀವಿ ಅಂತ ಸ್ವೀಡನ್‌ ಮಾರ್ಚ್‌ 09ರಂದು ಹೇಳ್ಕೊಂಡಿದೆ. ʻಸ್ವೀಡನ್‌ ಸರ್ಕಾರ UNRWA ಏಜೆನ್ಸಿಗೆ ಈ ವರ್ಷ 39 ಮಿಲಿಯನ್‌ ಡಾಲರ್‌ ಅಂದ್ರೆ ಸುಮಾರು 323.7 ಕೋಟಿ ರೂಪಾಯಿ ಮಂಜೂರು ಮಾಡಿದೆ. ಈ ಪೈಕಿ 157.7 ಕೋಟಿ ರೂಪಾಯಿಯನ್ನ ಮೊದಲ ಹಂತದಲ್ಲಿ ನೀಡಲಿದೆʼ ಅಂತ ಸ್ಟೇಟ್‌ಮೆಂಟ್‌ ನೀಡಿದೆ. ಇನ್ನು ಕೆನಡಾ ಕೂಡ ಹಣ ಸಹಾಯ ಮಾಡೋದನ್ನ ಕಂಟಿನ್ಯೂ ಮಾಡೋದಾಗಿ ಮಾರ್ಚ್‌ 08 ರಂದು ಕನ್ಫರ್ಮ್‌ ಮಾಡಿತ್ತು. ಅಂದ್ಹಾಗೆ ವಿಶ್ವಸಂಸ್ಥೆಯ ಈ UNRWA ಏಜೆನ್ಸಿ ಗಾಜಾ ಯುದ್ಧದಲ್ಲಿ ಹಮಾಸ್‌ ಜೊತೆ ಸೇರ್ಕೊಂಡಿತ್ತು ಅಂತ ಇಸ್ರೇಲ್‌ ಆರೋಪ ಮಾಡಿತ್ತು. ಈ ಬೆನ್ನಲ್ಲೆ ಕೆನಡಾ ಮತ್ತು ಸ್ವೀಡನ್‌ ಸೇರಿ ಒಟ್ಟು 16 ರಾಷ್ಟ್ರಗಳು UNRWA ಗೆ ಹಣಸಹಾಯ ಮಾಡೋದನ್ನ ಸ್ಟಾಪ್‌ ಮಾಡಿದ್ವು. ಆದ್ರೆ ಇದೀಗ ಕೆನಡಾ ಮತ್ತು ಸ್ವೀಡನ್‌ ಮನಸ್ಸು ಬದಲಾಯಿಸ್ಕೊಂಡಿದೆ…ಪ್ಯಾಲೆಸ್ತೀನ್‌ ಸಹಾಯಕ್ಕೆ ನಿಂತಿದೆ.

ಅಂತಾರಾಷ್ಟ್ರೀಯ ಮನ್ನಣೆಯಿಂದ ವಂಚಿತವಾಗಿರೋ ಪ್ಯಲೆಸ್ತೀನ್‌ನ ನಾವು ಗುರುತಿಸ್ತೀವಿ ಅಂತ ಇದೀಗ ಸ್ಪೇನ್‌ ಬೆಂಬಲ ಸೂಚಿಸಿ ಮುಂದೆ ಬಂದಿದೆ. ಎಸ್‌ ಪ್ಯಾಲೆಸ್ತೀನ್‌ ಒಂದು ಪ್ರತ್ಯೇಕ ರಾಜ್ಯ ಅಂತ ಸ್ಪೇನ್‌ ಸಂಸತ್ತು ಗುರುತಿಸುತ್ತೆ. ಈ ಬಗ್ಗೆ ನಾವು ಪ್ರಸ್ತಾವಿಸ್ತೀವಿ ಅಂತ ಸ್ಪೇನ್‌ನ ಪ್ರಧಾನಿ ಪೆಡ್ರೊ ಸ್ಯಾಂಚೆಜ್‌ ಮಾರ್ಚ್‌ 09 ರಂದು ಹೇಳಿಕೆ ನೀಡಿದ್ದಾರೆ. ʻಪ್ಯಾಲೆಸ್ತೀನ್‌ ರಾಜ್ಯಕ್ಕೆ ಸ್ಪೇನ್‌ನ ಮಾನ್ಯತೆ ನೀಡಲು ನಾನು ಪ್ರಸ್ತಾಪಿಸ್ತೇನೆ. ನೈತಿಕ ನಂಬಿಕೆಗಳ ಆಧಾರದ ಮೇಲೆ ಈ ಪ್ರಸ್ತಾವನೆ ಮುಂದಿಡ್ತೀನಿ. ಹೀಗೆ ಮಾಡಿದ್ರೆ ಮಾತ್ರ ಇಸ್ರೇಲ್‌ ಮತ್ತು ಪ್ಯಾಲೆಸ್ತೀನ್‌ ಒಟ್ಟಿಗೆ ಶಾಂತಿಯಿಂದ ಬದುಕೋಕೆ ಸಾಧ್ಯʼ ಅಂತ ಹೇಳಿದ್ದಾರೆ.


-masthmagaa.com

Contact Us for Advertisement

Leave a Reply