ತೈವಾನ್‌ ಭೂಕಂಪಕ್ಕೆ ಚೀನಾಗೆ ಬೆಂಬಲಿಸಿದ ಬೊಲಿವಿಯ!

masthmagaa.com:

ಕೆಲ ದಿನಗಳ ಹಿಂದಷ್ಟೇ ತೈವಾನ್‌ನಲ್ಲಿ ಪ್ರಬಲ ಭೂಕಂಪ ಉಂಟಾಗಿ ಸಾಕಷ್ಟು ಪ್ರಾಣ ಹಾನಿ, ನಷ್ಟಗಳುಂಟಾಗಿದ್ವು. ಈ ಬಗ್ಗೆ ಜಗತ್ತಿನಾದ್ಯಂತ ಭಾರೀ ಕಳವಳ ವ್ಯಕ್ತವಾಗಿ…ತೈವಾನ್‌ಗೆ ನೆರವು ನೀಡೋಕೆ ಮುಂದಾದ್ವು. ಆದ್ರೆ ಈ ವಿಚಾರದಲ್ಲೂ ಚೀನಾ ನರಿ ಬುದ್ದಿ ತೋರಿಸಿದೆ. ಎಲ್ಲಾ ದೇಶಗಳು ತೈವಾನ್‌ ಸ್ಥಿತಿಗೆ ಕಳವಳ ವ್ಯಕ್ತಪಡಿಸಿದಾಗ…ಅದಕ್ಕೆ ಚೀನಾ ಥ್ಯಾಂಕ್ಸ್‌ ಅಂತೇಳಿದೆ. ತೈವಾನ್‌ ಮೇಲೆ ಪುನಃ ತನ್ನ ಅಧಿಕಾರ ಚಲಾಯಿಸೋ ಕೆಲಸ ಮಾಡಿದೆ. ಇದನ್ನ ತೈವಾನ್‌ ತೀವ್ರವಾಗಿ ಖಂಡಿಸಿ…ʻಈ ರೀತಿ ಕಮೆಂಟ್‌ ಮಾಡೋಕೆ ಚೀನಾಗೆ ನಾಚಿಕೆ ಆಗ್ಬೇಕುʼ ಅಂತ ಉಗಿದಿದೆ. ಜೊತೆಗೆ ಸಹಾಯಕ್ಕೆ ಮುಂದಾಗಿರೋ ರಾಷ್ಟ್ರಗಳಿಗೆ ತೈವಾನ್‌ ಧನ್ಯವಾದ ಅರ್ಪಿಸಿದೆ. ಆದ್ರೆ….ಈ ವಿಚಾರ ಇಲ್ಲಿಗೆ ಮುಗಿದಿಲ್ಲ. ಈ ಸಂಬಂಧ ದಕ್ಷಿಣ ಅಮೆರಿಕದ ಬೊಲಿವಿಯ ದೇಶ ಇದೀಗ ಚೀನಾಗೆ ಬೆಂಬಲ ಸೂಚಿಸಿದೆ. ತೈವಾನ್‌ನಲ್ಲಿ ಭೂಕಂಪ ಆಗಿರೋದಕ್ಕೆ ಚೀನಾ ಜೊತೆ ನಾವಿದ್ದೀವಿ ಅಂತ ಬೊಲಿವಿಯಾದ ವಿದೇಶಾಂಗ ಸಚಿವಾಲಯ ತಿಳಿಸಿದೆ. ಇದಕ್ಕೆ ಸಿಡಿಮಿಡಿಗೊಂಡ ತೈವಾನ್‌ ಬೊಲಿವಿಯ ಹೇಳಿಕೆಯನ್ನ ತೀವ್ರವಾಗಿ ಖಂಡಿಸಿ, ತರಾಟೆಗೆ ತೆಗೆದ್ಕೊಂಡಿದೆ. ʻನೀವು ಹಾರು ಅಂದಾಕ್ಷಣ ಹಾರುವಂತಹ ದುಷ್ಟ ಚೀನಾದ ಕೈಗೊಂಬೆಯಾಗಬಾರ್ದುʼ ಅಂತ ತೈವಾನ್‌ ವಿದೇಶಾಂಗ ಸಚಿವ ಹೇಳಿದ್ದಾರೆ.

ಇನ್ನು ತೈವಾನ್‌ನಲ್ಲಿ ಭೀಕರ ಭೂಕಂಪ ಉಂಟಾದ ಬೆನ್ನಲ್ಲೇ ಜಪಾನ್‌ನಲ್ಲೂ ಭೂಕಂಪವಾಗಿತ್ತು. ನಂತ್ರ ಇದೀಗ ಅಮೆರಿಕದಲ್ಲೂ ಭೂಮಿ ಕಂಪಿಸಿರೋ ಘಟನೆ ವರದಿಯಾಗಿದೆ. ಅಮೆರಿಕದ ನ್ಯೂಯಾರ್ಕ್‌ ಮತ್ತು ನ್ಯೂ ಜರ್ಸಿನಲ್ಲಿ ಏಪ್ರಿಲ್‌ 05 ರಂದು 4.8 ತೀವ್ರತೆಯ ಭೂಕಂಪ ಸಂಭವಿಸಿದೆ. ಇನ್ನು ನ್ಯೂಯಾರ್ಕ್‌ನಲ್ಲಿ ಸಂಭವಿಸಿರೋ ಈ ಭೂಕಂಪಕ್ಕೆ ಅಲ್ಲಿನ ಫೇಮಸ್‌ ಸ್ಟ್ಯಾಚು ಅಫ್‌ ಲಿಬರ್ಟಿ ಕೂಡ ಶೇಕ್‌ ಆಗಿದೆ. ಈ ಪ್ರತಿಮೆ ಅಲುಗಾಡಿರೋ ವಿಡಿಯೋ ಸೋಶಿಯಲ್‌ ಮೀಡಿಯಾಗಳಲ್ಲಿ ಹರಿದಾಡ್ತಿದೆ. ಅಷ್ಟೇ ಅಲ್ದೇ ಭೂಕಂಪದಿಂದ ನ್ಯೂಯಾರ್ಕ್‌ನಲ್ಲಿರೋ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ನಡೀತಿದ್ದ ಸಭೆಗೂ ಅಡ್ಡಿಯಾಗಿದೆ. ಈ ಸಭೆಯಲ್ಲಿ ನೆರೆದಿರೋ ಅಧಿಕಾರಿಗಳಿಗೂ ಭೂಕಂಪಿಸಿರೋದು ಅನುಭವಕ್ಕೆ ಬಂದಿದೆ.

-masthmagaa.com

Contact Us for Advertisement

Leave a Reply