ಐಪಿಎಲ್ ಪಂದ್ಯ ಪ್ರಸಾರ ಮಾಡಂಗಿಲ್ಲ ಅಂದಿದ್ಯಾಕೆ ಗೊತ್ತಾ ತಾಲಿಬಾನ್?

masthmagaa.com:

ತಾಲಿಬಾನಿಗಳು ಚಿತ್ರ ವಿಚಿತ್ರ ಆದೇಶಗಳಿಂದ ಮತ್ತೆ ವಿಶ್ವದಾದ್ಯಂತ ಸುದ್ದಿಯಾಗ್ತಿದ್ದಾರೆ. ಈಗ ಐಪಿಎಲ್ ಬ್ಯಾನ್ ಮಾಡಿದಾರೆ. ಅರೆ ಐಪಿಎಲ್ ಆಗ್ತಿರೋದು ದುಬೈಲಿ. ಇವರು ಯಾಕೆ ಬ್ಯಾನ್ ಮಾಡ್ತಾರೆ ಅನ್ಕೊಂಡ್ರಾ..? ಐಪಿಎಲ್ ಅಂದ್ರೆ ಟಿವಿಗಳಲ್ಲಿ ಐಪಿಎಲ್ ಪಂದ್ಯಾವಳಿಗಳನ್ನ ಪ್ರಸಾರ ಮಾಡ್ಬಾರ್ದು. ಈ ಪಂದ್ಯಗಳ ವೀಕ್ಷಣೆಗೆ ಸ್ಟೇಡಿಯಂಗೆ ಮಹಿಳೆಯರು ಹೋಗಿರ್ತಾರೆ. ಅವರು ಕೂಡ ಟಿವಿಗಳಲ್ಲಿ ಬರ್ತಾರೆ. ಈ ರೀತಿನೂ ಯಾರೂ ಹುಡಗೀರನ್ನ ನೋಡ್ಬಾರ್ದು. ಪ್ರಸಾರನೂ ಮಾಡ್ಬಾರ್ದು ಅಂತ ಅಫ್ಘನ್ ಮಾಧ್ಯಮಗಳಿಗೆ ಎಚ್ಚರಿಸಿದೆ.

-masthmagaa.com

Contact Us for Advertisement

Leave a Reply