ಐಎಸ್ ಉಗ್ರರ ಹಾವಳಿ ಕಂಟ್ರೋಲ್​ಗೆ ಬಂದಿದೆ: ತಾಲಿಬಾನ್

masthmagaa.com:

ಅಫ್ಘಾನಿಸ್ತಾನದಲ್ಲಿ ಐಎಸ್ ಉಗ್ರರ ಕಾಟ ಸಾಕಷ್ಟು ಮಟ್ಟಿಗೆ ಕಂಟ್ರೋಲ್​​ಗೆ ಬಂದಿದೆ ಅಂತ ತಾಲಿಬಾನಿಗಳು ಹೇಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಝೈಬುಲ್ಲಾ ಮುಜಾಹಿದ್​​, ಐಎಸ್ ಉಗ್ರರು ನಮಗೇನೂ ದೊಡ್ಡ ಅಪಾಯವಲ್ಲ. ಈಗಾಗಲೇ ಈ ಸಂಘಟನೆಗೆ ಸೇರಿದ ಮತ್ತು ಈ ಸಂಘಟನೆ ಬಗ್ಗೆ ಅನುಕಂಪ ಇರೋ 600 ಮಂದಿಯನ್ನು ಅರೆಸ್ಟ್ ಮಾಡಿದ್ದೀವಿ. ಅವರಲ್ಲಿ ಕೆಲವರು ಮಹಿಳೆಯರು ಕೂಡ ಸೇರಿದ್ದು, ಅವರನ್ನು ಮಹಿಳೆಯರೇ ವಿಚಾರಣೆ ನಡೆಸ್ತಿದ್ದಾರೆ ಅಂತ ಹೇಳಿದ್ದಾರೆ. ಜೊತೆಗೆ ಅಫ್ಘಾನಿಸ್ತಾನದಲ್ಲಿ ಐಎಸ್ ಉಗ್ರರು ಹೆಚ್ಚಿನ ಸಂಖ್ಯೆಯಲ್ಲಿಲ್ಲ. ಹೀಗಾಗಿ ಅವರಿಗೆ ಬೆಂಬಲವೂ ಕಡಿಮೆ ಪ್ರಮಾಣದಲ್ಲಿದೆ. ಅವರ ವಿರುದ್ಧ ತಾಲಿಬಾನ್ ಸರ್ಕಾರ ಕಾರ್ಯಾಚರಣೆ ಮುಂದುವರಿಸಲಿದೆ ಅಂತ ಝೈಬುಲ್ಲಾ ಮಾಹಿತಿ ನೀಡಿದ್ದಾರೆ. ಆದ್ರೆ ತಾಲಿಬಾನಿಗಳು ಅಫ್ಘಾನಿಸ್ತಾನದಲ್ಲಿ ಅಧಿಕಾರಕ್ಕೆ ಬಂದ್ಮೇಲೆ ನಿರಂತರವಾಗಿ ಐಎಸ್ ಉಗ್ರರು ದಾಳಿ ನಡೆಸುತ್ತಲೇ ಇದ್ದಾರೆ.

-masthmagaa.com

Contact Us for Advertisement

Leave a Reply