ತಾಲಿಬಾನಿಗಳ ವೆಬ್​ಸೈಟ್​​ಗಳು ಇದ್ದಕ್ಕಿದ್ದಂತೆ ಆಫ್​​ಲೈನ್! ಕಾರಣ ನಿಗೂಢ

masthmagaa.com:

ತಾಲಿಬಾನಿಗಳ ಅಧಿಕೃತ ವೆಬ್​ಸೈಟ್ ಮಾಯವಾಗಿದೆ. ಇದಕ್ಕೆ ಕಾರಣವೇನು..? ಟೆಕ್ನಿಕಲ್ ವಿಚಾರನಾ.. ಅಥವಾ ಬೇರೆ ಏನಾದ್ರೂ ಇದ್ಯಾ ಅನ್ನೋದು ಇನ್ನೂ ಗೊತ್ತಾಗಿಲ್ಲ. ಅಂದಹಾಗೆ ತಾಲಿಬಾನಿಗಳು ಪಶ್ತೋ, ದರಿ, ಅರಬ್, ಉರ್ದು ಮತ್ತು ಇಂಗ್ಲಿಷ್ ಭಾಷೆಯ ಸಪರೇಟ್ ವೆಬ್​ಸೈಟ್​​ಗಳನ್ನು ಬಳಸುತ್ತಿದ್ರು. ಆದ್ರೆ ಅವೆಲ್ಲವೂ ಈಗ ಇದ್ದಕ್ಕಿದ್ದಂತೆ ಇಂಟರ್​ನೆಟ್​​ನಿಂದ ಕಣ್ಮರೆಯಾಗಿವೆ.

ತಾಲಿಬಾನ್ ಹಾವಳಿ ಜಾಸ್ತಿಯಾಗ್ತಿದ್ದಂತೆ ಮಾಧ್ಯಮಗಳಿಗೆ ಕಿರುಕುಳ ಕೂಡ ಜಾಸ್ತಿಯಾಗ್ತಿದೆ ಅಂತ ವರದಿಯಾಗಿದೆ. ಈ ಸಂಬಂಧ ನಾವು ತಾಲಿಬಾನಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೀವಿ. ಈ ವಿಚಾರವನ್ನು ಪ್ರಸ್ತಾಪಿಸಿದ್ದೀವಿ ಅಂತ ಅಮೆರಿಕ ಸರ್ಕಾರ ತಿಳಿಸಿದೆ.

-masthmagaa.com

Contact Us for Advertisement

Leave a Reply