ಭಾರತದ ಬಜೆಟ್‌ನಿಂದ ಬಿಂದಾಸ್‌, ದಿಲ್‌ಖುಷ್‌ ಆಗಿದ್ದೇವೆ ಎಂದ ತಾಲಿಬಾನಿಗಳು! ಮ್ಯಾಟರ್‌ ಏನ್‌ ಗೊತ್ತಾ?

masthmagaa.com:

ಭಾರತದ 2023-24ನೇ ಸಾಲಿನ ಬಜೆಟ್‌ ಗೆ ಅಫ್ಘಾನಿಸ್ತಾನದ ತಾಲಿಬಾನ್ ನಾಯಕರು ತೀವ್ರ ಸಂತೋಷ ವ್ಯಕ್ತಪಡಿಸಿದ್ದದಾರೆ. ಭಾರತ ಮಂಡಿಸಿರುವ ಬಜೆಟ್‌ ಎರಡೂ ದೇಶಗಳ ನಡವಿನ ಬಾಂಧವ್ಯ ಸುಧಾರಿಸೋಕೆ ಮತ್ತು ಅಪನಂಬಿಕೆ ತೊಡೆದು ಹಾಕುವಲ್ಲಿ ಪ್ರಮುಖ ಪಾತ್ರವಹಿಸಲಿದೆ ಅಂತ ಬಣ್ಣಿಸಿದ್ದಾರೆ. ಅಂದಹಾಗೆ ಈ ಸಾಲಿನ ಬಜೆಟ್‌ನಲ್ಲಿ ಅಫ್ಘಾನಿಸ್ತಾನದ ಅಭಿವೃದ್ಧಿಗೆ 200 ಕೋಟಿ ರೂಪಾಯಿ ನೆರವು ನೀಡುವ ಬಗ್ಗೆ ಪ್ರಸ್ತಾಪಿಸಲಾಗಿದೆ. ಕಳೆದ ಸಲ ಕೂಡ ಅಫ್ಘಾನ್‌ ಅಭಿವೃದ್ದಿಗೆ ಹಣ ಘೋಷಣೆ ಮಾಡಲಾಗಿತ್ತು. ಈ ಮೂಲಕ ತಾಲಿಬಾನ್‌ ಅಧಿಕಾರಕ್ಕೆ ಬಂದ್ಮೇಲೆ ಇದು ಎರಡನೇ ಸಲ ಭಾರತ ಅಫ್ಘಾನ್‌ಗೆ ಅನುದಾನ ಅನೌನ್ಸ್‌ ಮಾಡಿದೆ. ಇನ್ನು ಇದಕ್ಕೆ ಹರ್ಷ ವ್ಯಕ್ತಪಡಿಸಿರೋ ತಾಲಿಬಾನ್‌ ನಾಯಕರು, ‘ಅಫ್ಘಾನಿಸ್ತಾನದ ಅಭಿವೃದ್ಧಿಗೆ ಭಾರತದ ಕೊಡುಗೆಯನ್ನು ನಾವು ಸ್ವಾಗತಿಸುತ್ತೇವೆ. ಇದು ಉಭಯ ದೇಶಗಳ ನಡುವಿನ ನಂಬಿಕೆ ಮತ್ತು ಬಾಂಧವ್ಯ ವೃದ್ಧಿಗೆ ಕಾರಣವಾಗಲಿದೆ. ಭಾರತ ಅನುದಾನ ಕೊಡೋದನ್ನ, ಯೋಜನೆಗಳನ್ನು ಕೊಡೋದನ್ನ ಮುಂದುವರಿಸಿದರೆ ಎರಡೂ ದೇಶಗಳ ನಡುವಣ ಸಂಬಂಧ ವೃದ್ಧಿಯಾಗುವುದರ ಜತೆಗೆ ಅಪನಂಬಿಕೆಗಳು ಇಲ್ಲವಾಗುತ್ತವೆ ಅಂತ ತಾಲಿಬಾನ್​ನ ನಾಯಕ ಸುಹೈಲ್ ಶಹೀನ್ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply