ಅಣ್ಣನ ಸಿನಿಮಾಗೆ ತಮ್ಮನ ವಾಯ್ಸ್‌ : ಚಿರು ಕೊನೆ ಚಿತ್ರಕ್ಕೆ ರಿಲೀಸ್‌ ಡೇಟ್‌ ಫಿಕ್ಸ್‌ !

masthmagaa.com:

ಧ್ರುವ ಸರ್ಜಾ ಮತ್ತು ಚಿರಂಜೀವಿ ಸರ್ಜಾ ತುಂಬಾನೇ ಕ್ಲೋಸ್‌ ಇದ್ರು. ಹೆಸರಿಗೆ ಮಾತ್ರ ಅಣ್ಣ ತಮ್ಮ, ಆದ್ರೆ ಇವರಿಬ್ಬರೂ ಕ್ಲೋಸ್‌ ಫ್ರೆಂಡ್ಸ್ ರೀತಿಯೇ ಇರ್ತಾ ಇದ್ರು .‌ ಅಣ್ಣ ಚಿರು ಅಂದ್ರೆ ಧ್ರುವ ಸರ್ಜಾಗೆ ತುಂಬಾನೇ ಪ್ರೀತಿ ಮತ್ತೆ ಗೌರವ. ಇದೀಗ ಚಿರಂಜೀವಿ ಸರ್ಜಾ ಅಭಿನಯದ ಕೊನೆಯ ಚಿತ್ರ ರಾಜ ಮಾರ್ತಾಂಡ ಸಿನಿಮಾದ ರಿಲೀಸ್‌ ಡೇಟ್‌ ಫೈನಲ್‌ ಆಗಿದೆ. ಚಿರು ತಮ್ಮ ಕೊನೆಯ ಚಿತ್ರದ ಡಬ್ಬಿಂಗ್‌ ಮುಗಿಯೋದ್ರೊಳಗೆ ನಮ್ಮನ್ನೆಲ್ಲಾ ಅಗಲಿದ್ರು, ಹಾಗಾಗಿ ಚಿರು ಅಭಿನಯದ ಕೊನೆ ಚಿತ್ರಕ್ಕೆ ಧ್ರುವ ಸರ್ಜಾ ವಾಯ್ಸ್‌ ಡಬ್‌ ಮಾಡಿದ್ದಾರೆ.

‘ರಾಜಮಾರ್ತಾಂಡ’ ಚಿತ್ರವನ್ನು ಶಿವಕುಮಾರ್ ನಿರ್ಮಿಸಿದ್ದಾರೆ. ರಾಮನಾರಾಯಣ್ ಡೈರೆಕ್ಟ್‌ ಮಾಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಈ ಸಿನಿಮಾದಲ್ಲಿದೆ.

-masthmagaa.com

Contact Us for Advertisement

Leave a Reply