DRS ರಿವ್ಯೂ ಕೂಡ ಭಾರತ ಪರವಾಗಿ ಬರುತ್ತೆ, ತನಿಖೆ ಮಾಡಿಸಬೇಕು: ಪಾಕಿಸ್ತಾನ

masthmagaa.com:

ಭಾರತದಲ್ಲಿ ನಡಿತಿರೋ 2023ರ ವಿಶ್ವಕಪ್‌ನಲ್ಲಿ ಭಾರತ ತಂಡ ಅನ್‌ಬೀಟಬಲ್‌ ಆಗಿ ಮುನ್ನುಗ್ತಿದೆ. ಆದ್ರೆ ಟೀಮ್‌ ಇಂಡಿಯಾದ ಈ ಸಕ್ಸಸ್‌ ಸಹಿಸೋಕೆ ಆಗದ ಪಾಕಿಸ್ತಾನ ಒಂದಿಲ್ಲೊಂದು ಸುಳ್ಳು ಆರೋಪ ಮಾಡೋದನ್ನ ಕಂಟಿನ್ಯೂ ಮಾಡಿದೆ. ಇತ್ತೀಚೆಗೆ ಭಾರತೀಯ ಬೌಲರ್‌ಗೆ ವಿಶೇಷ ಬಾಲ್‌ಗಳನ್ನ ಕೊಡಲಾಗ್ತಿದೆ ಅಂತ ಆರೋಪಿಸಿದ್ದ ಪಾಕ್‌ ಮಾಜಿ ಕ್ರಿಕೆಟಿಗ ಹಸನ್‌ ರಾಝಾ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ. ನಿನ್ನೆ ನಡೆದ ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ ಮೈದಾನದಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾವನ್ನು 243 ರನ್‌ಗಳಿಂದ ಸೋಲಿಸಿ ಭರ್ಜರಿ ಗೆಲುವು ಸಾಧಿಸಿತ್ತು. ಈ ಬಗ್ಗೆ ಮಾತಾಡಿರೋ ರಾಝಾ, ಡಿಆರ್‌ಎಸ್ ಅನ್ನು ಭಾರತ ತನಗೆ ಬೇಕಾದಂತೆ ಬದಲಾಯಿಸುತ್ತಿದೆ. ಇದು ಸ್ಪಷ್ಟವಾಗಿ ಗೋಚರಿಸುತ್ತದೆ ಅಂತ ಆರೋಪಿಸಿದ್ದಾರೆ. ನಾನು ಡಿಆರ್‌ಎಸ್ ತಂತ್ರಜ್ಞಾನದ ಬಗ್ಗೆ ಮಾತನಾಡುತ್ತಿದ್ದೇನೆ ದಕ್ಷಿಣ ಆಫ್ರಿಕಾ ಆಟಗಾರ ವ್ಯಾನ್ ಡೆರ್ ಡಸ್ಸೆನ್ ಅವರ ಕಾಲಿಗೆ ಬಡಿದ ಚೆಂಡು ಲೆಗ್ ಸ್ಟಂಪ್ ಮೇಲೆ ಬಂದು ನಂತರ ಮಿಡಲ್ ಸ್ಟಂಪ್‌ಗೆ ಬಡಿಯುತ್ತಿತ್ತು. ಅದು ಹೇಗೆ ಸಾಧ್ಯ? ಚೆಂಡು ಲೆಗ್ ಸ್ಟಂಪ್ ಕಡೆಗೆ ಹೋಗಬೇಕು. ಎಲ್ಲರಂತೆ ನಾನು ನನ್ನ ಅಭಿಪ್ರಾಯವನ್ನು ಶೇರ್‌ ಮಾಡ್ತಿದ್ದೀನಿ. ಇಂತಹ ವಿಷಯಗಳನ್ನು ಪರಿಶೀಲಿಸಬೇಕು ಎಂದಿದ್ದಾರೆ. ಅಂದ್ಹಾಗೆ ಭಾರತ ಪರ ಶಮಿ ಬೌಲಿಂಗ್​ನಲ್ಲಿ ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ ಎಲ್​ಬಿ ಬಲೆಗೆ ಬಿದ್ದರು. ಆದರೆ, ಆನ್-ಫೀಲ್ಡ್ ಅಂಪೈರ್ ಭಾರತದ ಮನವಿಯನ್ನು ತಿರಸ್ಕರಿಸಿದರು. ನಂತರ ಭಾರತ ರಿವ್ಯೂ ತೆಗೆದುಕೊಂಡಿತು. ರಿವ್ಯೂನಲ್ಲಿ ಚೆಂಡು ಪಿಚ್ ಮಧ್ಯ ಮತ್ತು ಲೆಗ್-ಸ್ಟಂಪ್‌ನ ಮೇಲ್ಭಾಗಕ್ಕೆ ಬಡಿದಿರುವುದು ತೋರಿಸಿದೆ. ಹೀಗಾಗಿ ಥರ್ಡ್ ಅಂಪೈರ್ ಔಟ್ ಕೊಟ್ಟರು.

-masthmagaa.com

Contact Us for Advertisement

Leave a Reply