ಕಿರುತೆರೆ ನಟಿ ಶೃತಿ ಷಣ್ಮುಖ ಅವರ ಪತಿ ಹೃದಯಾಘಾತದಿಂದ ಸಾವು !

masthmagaa.com:

ಕಿರುತೆರೆ ನಟಿ ಶೃತಿ ಷಣ್ಮುಖ ಅವರ ಪತಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಶೃತಿ ಅವರ ಪತಿ ಅರವಿಂದ್ ಅವರು ಮನೆಯಲ್ಲಿದ್ದ ವೇಳೆಯೇ ಹೃದಯಾಘಾತವಾಗಿತ್ತು. ಈ ಜೋಡಿ ಇತ್ತೀಚೆಗಷ್ಟೇ ತಮ್ಮ ಮೊದಲ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದರು.

ಶೃತಿ ಶಣ್ಮುಗ ಅವರ ಪತಿ ಅರವಿಂದ್ ಅವರು ಬಾಡಿ ಬಿಲ್ಡರ್ ಆಗಿದ್ದರು. ದೇಹದ ತೂಕ ಇಳಿಸಿಕೊಳ್ಳಲು ಟ್ರೇನಿಂಗ್ ನೀಡ್ತಿದ್ರು. 2022ರ ‘ಮಿಸ್ಟರ್ ತಮಿಳುನಾಡು’ ಕೂಡ ಆಗಿದ್ರು. ಫಿಟ್ನೆಸ್​ಗೆ ಅವರು ಹೆಚ್ಚು ಒತ್ತು ನೀಡ್ತಿದ್ರು. ಆಗಸ್ಟ್ 2ರ ಸಂಜೆ ಹೃದಯಾಘಾತ ಆಗಿದೆ. ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ, ಯಾವುದೇ ಪ್ರಯೋಜನ ಆಗಿಲ್ಲ. ಅಭಿಮಾನಿಗಳಿಗಾಗಿ ಶೃತಿ ವಿಡಿಯೋ ಹಾಗೂ ಫೋಟೋ ಶೇರ್ ಮಾಡಿಕೊಳ್ಳುತ್ತಿದ್ದರು. ಆದರೆ, ಅರವಿಂದ್ ಅವರ ನಿಧನ ವಾರ್ತೆ ಈಗ ಅನೇಕರಿಗೆ ಶಾಕ್ ತಂದಿದೆ. ಶ್ರುತಿ ಅವರು ನಾದಸ್ವರಂ, ಭಾರತಿ ಕನ್ನಮ್ಮ, ವಾನಿ ರಾಣಿ, ಕಲ್ಯಾಣ ಪರಿಸು, ಪೊನ್ನೂಂಜಲ್ ಧಾರಾವಾಹಿಗಳಲ್ಲಿ ನಟಿಸಿದ್ದರು.

-masthmagaa.com

Contact Us for Advertisement

Leave a Reply