ಯಶ್ ಮುಂದಿನ ಸಿನಿಮಾಗೆ ತೆಲುಗು ನಿರ್ಮಾಪಕ ಫಿಕ್ಸ್!?

masthmagaa.com:

ಯಶ್‌ ಅವರ ಮುಂದಿನ ಮೂವಿಗೆ ಹಿಂಟ್‌ ಸಿಕ್ಕಿದೆ. ಈ ಹಿಂದೆ ಯಶ್‌ ಅವರ ಮುಂದಿನ ಮೂವಿ ಎಪ್ರಿಲ್‌ ಎಂಡ್‌ನಲ್ಲಿ ಅನೌನ್ಸ್‌ ಆಗತ್ತೆ ಅಂತ ಸುದ್ದಿಯಾಗಿತ್ತು. ಯಾವುದೋ ದೊಡ್ಡ ಮಟ್ಟದ ಮೂವಿಯನ್ನೇ ಯಶ್‌ ಮಾಡ್ತಾರೆ ತಮ್ಮ ಫ್ಯಾನ್ಸ್‌ಗಳಿಗೆ ನಿರಾಸೆ ಮಾಡೋದಿಲ್ಲ ಅನ್ನೋದು ಅವರ ಅಭಿಮಾನಿಗಳ ಅಭಿಪ್ರಾಯ ಕೂಡ ಹೌದು. ಯಶ್ ಅವರ ಮುಂದಿನ ಸಿನಿಮಾ ಯಾವ್ದು ಇರಬಹುದು ? ಪ್ರೋಡಕ್ಷನ್‌ ಟೀಮ್‌ ಯಾವ್ದು ? ಇದೆಲ್ಲದರ ಬಗ್ಗೆ ಒಂದು ಹಿಂಟ್‌ ಸಿಕ್ಕಿದೆ. ಏನದು ಅಂತ ನೊಡೋಣ ಬನ್ನಿ. ಕೆಲವೊಬ್ಬರು ತಮ್ಮ ಫೇವರೇಟ್‌ ಹೀರೊಗಳ ಫ್ಯಾನ್‌ ಪೇಜ್‌ಗಳನ್ನ ಮಾಡಿರ್ತಾರೆ. ಇದೇ ಒಂದು ಫ್ಯಾನ್‌ ಪೇಜ್‌ ನಿಂದ ಯಶ್‌ ಅವರ ಮುಂದಿನ ಪ್ರಾಜೆಕ್ಟ್‌ ಯಾವ್ದಿರಬಹುದು ಅಂತ ಗೊತ್ತಾಗಿದೆ.

ತೆಲುಗಿನ ಶ್ರೀ ವೆಂಕಟೇಶ್ವರ ಕ್ರೀಯೆಷನ್ಸ್‌ ಕಡೆಯಿಂದ ಅಭಿಮಾನಿಗಳ ಜೊತೆ Q&A ಅಂದ್ರೆ ಕೊಶ್ಚನ್‌ ಆಂಡ್‌ ಆನ್ಸರ್‌ ರೀತಿ ಚಿಟ್‌ ಚಾಟ್‌ ಮಾಡಿದ್ದರು. ಅಭಿಮಾನಿಗಳು ಟ್ವಟ್ಟರ್‌ ಮುಖಾಂತರ ದಿಲ್‌ ರಾಜು ಅವರಿಗೆ ಪ್ರಶ್ನೆಗಳನ್ನ ಕೇಳೊ ಅವಕಾಶ ಇತ್ತು. ಯಶ್‌ ಅಭಿಮಾನಿಯೊಬ್ಬ “ನಿಮ್ಮ ಮತ್ತು ಯಶ್‌ ಕಾಂಬಿನೇಷನ್‌ನಲ್ಲಿ ನಾವು ಸಿನಿಮಾನ ನಿರೀಕ್ಷೆ ಮಾಡಹಬಹುದಾ ?” ಅಂತ ಪ್ರಶ್ನೆ ಮಾಡಿದ್ದರು. ಈ ಪ್ರಶ್ನೆಗೆ ಉತ್ತರಿಸಿದ ದಿಲ್‌ ರಾಜು ಅವರು “ಹೌದು” ಅಂತ ಉತ್ತರಕೊಟ್ಟಿದ್ದಾರೆ. ಹಾಗಾದ್ರೆ ಯಶ್‌ ಅವರ 19ನೇ ಸಿನಿಮಾ ಇವರ ಜೊತೆ ಆಗಬಹುದಾ ಇಲ್ವಾ ಅನ್ನೋದ್ರ ಬಗ್ಗೆ ಮಾಹಿತಿ ಇಲ್ಲ. ಆದರೆ ಇವರ ಕಾಂಬಿನೇಷನ್‌ನಲ್ಲಿ ಸಿನಿಮಾ ಬರೋದಂತು ಕನ್‌ಫರ್ಮ್‌ ಆಗಿದೆ. ಯಶ್‌ ಅವರೇ ಅಥವಾ ಸಿನಿಮಾ ತಂಡ ಈ ವಿಷಯದ ಬಗ್ಗೆ ಮಾತಾಡೋ ತನಕ ವೇಟ್‌ ಮಾಡ್ಬೇಕಾಗಿದೆ.

ಇನ್ನೂ ಈ ಶ್ರೀ ವೆಂಕಟೇಶ್ವರ ಕ್ರೀಯೆಷನ್ಸ್‌ ನ ಫೌಂಡರ್‌ ದಿಲ್‌ ರಾಜು. ದಿಲ್‌, ಆರ್ಯ, ಭದ್ರ, ಫಿದಾದಂತಹ ಸೂಪರ್‌ ಹಿಟ್‌ ಮೂವಿಗಳು ಬಂದಿದ್ದು ಇವರ ಬ್ಯಾನರ್‌ನಲ್ಲೆ. ದಿಲ್‌ ಮೂವಿ ಹಿಟ್‌ನ ನಂತರ ಇವರು ದಿಲ್‌ ರಾಜು ಅಂತಾನೇ ಫೇಮಸ್‌ ಆದ್ರು. ಇನ್ನು ಸದ್ಯ ರಿಲಿಸ್‌ ಆದಂತ ವಿಜಯ್‌ ದಳಪತಿ ಮತ್ತು ರಶ್ಮಿಕಾ ಕಾಂಬಿನೇಷ್‌ನಲ್ಲಿ ಬಂದಂತ ವಾರಿಸು ಚಿತ್ರ ಇವರ ಪ್ರೋಡಕ್ಷನ್‌ ಹೌಸ್‌ನಲ್ಲೇ ನಿರ್ಮಾಣವಾಗಿದ್ದು. ಕನ್ನಡದಲ್ಲಿ ಹೇಗೆ ಹೊಂಬಾಳೆ ಫಿಲ್ಮ್ಸ್‌ ಫೇಮಸ್‌ ಇದಿಯೋ ಹಾಗೇ ತೆಲುಗಿನಲ್ಲಿ ಶ್ರೀ ವೆಂಕಟೇಶ್ವರ ಕ್ರೀಯೆಷನ್ಸ್‌ ಫೇಮಸ್‌ ಇದೆ. ಇಂತಹ ಒಂದು ಫ್ರೊಡಕ್ಷನ್‌ ಹೌಸ್‌ನಿಂದ ಬರುವಂತ ಮೂವಿ ಬಗ್ಗೆ ಅಭಿಮಾನಿಗಳು ತುಂಬಾನೇ ಎಕ್ಸ್‌ಪೆಕ್ಟೇಷನ್‌ ಇಟ್ಕೊಂಡಿರ್ತಾರೆ. ಪ್ರೊಡಕ್ಷನ್‌ ಹೌಸ್‌ನಿಂದ ಸುದ್ದಿ ಬಂದಾಗಿದೆ. ಇನ್ನೂ ಯಶ್‌ ಅವರು ಹೇಳೊದ್‌ ಒಂದೇ ಬಾಕಿ ಇರೋದು.

ಇನ್ನೂ ವೆಂಕಟೇಶ್ವರ ಕ್ರೀಯೆಷನ್ಸ್‌ ಕಡೆಯಿಂದ “ಗೇಮ್‌ ಚೇಂಜರ್‌” ಮೂವಿ ರೆಡಿ ಆಗ್ತಾ ಇದೆ. ಇದರಲ್ಲಿ ರಾಮ್‌ ಚರಣ್‌ ಹೀರೊ ಆಗಿ ಆಕ್ಟ್‌ ಮಾಡಲಿದ್ದಾರೆ. ರಾಮ್‌ ಚರಣ್‌ ಅವರ ಬರ್ತ್‌ಡೇ ದಿನದಂದು ಗೇಮ್‌ ಚೇಂಜರ್‌ ಮೂವಿಯನ್ನ ಅನೌನ್ಸ್‌ ಮಾಡಿದ್ದರು. ರಾಮ್‌ ಚರಣ್‌ ಅವರ 15ನೇ ಚಿತ್ರ ಇದೇ ವರ್ಷ ಸಪ್ಟೆಂಬರ್‌ನಲ್ಲಿ ರಿಲೀಸ್‌ ಆಗಲಿದೆ. ಅಲ್ಲು ಅರ್ಜುನ್‌ ಅವರ ಐಕಾನ್‌ ಮೂವಿಯಲ್ಲೂ ಕೂಡ ದಿಲ್‌ ರಾಜು ಅವರು ಬ್ಯೂಸಿ ಆಗಿದ್ದಾರೆ. ಐಕಾನ್‌ ಚಿತ್ರ ಇದೇ ವರ್ಷ ಡಿಸೆಂಬರ್‌ ನಲ್ಲಿ ರಿಲೀಸ್‌ ಆಗಬಹುದು.

-masthmagaa.com

Contact Us for Advertisement

Leave a Reply