ಭಾರತದಲ್ಲಿ ಓಪನ್‌ ಆಗಲಿದೆ ಟೆಸ್ಲಾ ಕಾರು ಉತ್ಪಾದಕ ಘಟಕ?

masthmagaa.com:

ಭಾರತದಲ್ಲಿ ಎಲೆಕ್ಟ್ರಿಕ್‌ ಕಾರು ಘಟಕ ನಿರ್ಮಾಣಕ್ಕೆ ಸಂಬಂಧಿಸಿದಂತೆ ಎಲಾನ್‌ ಮಸ್ಕ್‌ ಒಡೆತನದ ಟೆಸ್ಲಾ ಕಂಪನಿ ಕೇಂದ್ರ ಸರ್ಕಾರದ ಜೊತೆ ಮಾತುಕತೆ ನಡೆಸುತ್ತಿದೆ ಅಂತ ಗೊತ್ತಾಗಿದೆ. ವಾರ್ಷಿಕವಾಗಿ 5 ಲಕ್ಷ ಎಲೆಕ್ಟ್ರಿಕ್‌ ವಾಹನಗಳನ್ನ ತಯಾರಿಸೋ ಸಾಮರ್ಥ್ಯದ ಘಟಕ ಸ್ಥಾಪನೆಗೆ ಹೂಡಿಕೆ ಮಾಡಲು ಚರ್ಚೆ ನಡೆಸಲಾಗ್ತಿದೆ ಅಂತ ತಿಳಿದು ಬಂದಿದೆ. ಅಲ್ದೆ ಭಾರತದಲ್ಲಿ ತಯಾರಾಗೋ ಎಲೆಕ್ಟ್ರಿಕ್‌ ಕಾರಿನ ಬೆಲೆ 20 ಲಕ್ಷ ರೂಪಾಯಿಯಿಂದ ಆರಂಭವಾಗೋ ಸಾಧ್ಯತೆಯಿದೆ ಎನ್ನಲಾಗಿದೆ. ಜೊತೆಗೆ ಇಂಡೋ-ಪೆಸಿಫಿಕ್ ಪ್ರದೇಶದ ದೇಶಗಳಿಗೆ ಭಾರತದಿಂದ ಕಾರುಗಳನ್ನು ರಫ್ತು ಮಾಡಲು ಟೆಸ್ಲಾ ಪ್ಲಾನ್‌ ಮಾಡ್ತಿದೆ ಅನ್ನೊ ಮಾಹಿತಿ ಸಿಕ್ಕಿದೆ. ಇನ್ನು ಸ್ಥಳೀಯ ಉತ್ಪಾದಕತೆ ಹಾಗೂ ರಫ್ತು ಎರಡನ್ನೂ ಹೊಂದಿರೋ ಉತ್ತಮ ಯೋಜನೆ ಇಟ್ಕೊಂಡು ಟೆಸ್ಲಾ ಕಂಪನಿ ಭಾರತದ ಬಳಿ ಬಂದಿದೆ. ಹೀಗಾಗಿ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯ ಈ ಮಾತುಕತೆಯನ್ನ ಮುಂದುವರೆಸುತ್ತಿದ್ದು, ಒಂದೊಳ್ಳೆ ಒಪ್ಪಂದಕ್ಕೆ ಬರೋ ಸಾಧ್ಯತೆಯಿದೆ ಅಂತ ಹೇಳಲಾಗ್ತಿದೆ. ಆದ್ರೆ ಈ ಬಗ್ಗೆ ಇನ್ನಷ್ಟೇ ಅಧಿಕೃತ ಮಾಹಿತಿ ಹೊರಬರಬೇಕಿದೆ. ಅಂದ್ಹಾಗೆ ಕಳೆದ ತಿಂಗಳು ಅಮೆರಿಕ ಪ್ರವಾಸದ ಸಂದರ್ಭದಲ್ಲಿ ಮಸ್ಕ್ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನ ಭೇಟಿಯಾಗಿ ಮಾತುಕತೆ ನಡೆಸಿದ್ದರು.

-masthmagaa.com

Contact Us for Advertisement

Leave a Reply