ವಿಶ್ವ ಆರೋಗ್ಯ ಸಂಸ್ಥೆ ವಾರ್ನಿಂಗ್ ಬಗ್ಗೆ ಪಟ್ಟುಬಿಡದ ಥೈಲ್ಯಾಂಡ್​

masthmagaa.com:

ಬೇರೆ ಬೇರೆ ಕೊರೋನಾ ಲಸಿಕೆಯನ್ನ ಮಿಕ್ಸ್​ ಮಾಡೋದು ಅಪಾಯಕಾರಿ ಅಂತ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದ್ರೂ, ಥೈಲ್ಯಾಂಡ್ ಸರ್ಕಾರ ಮಾತ್ರ ವ್ಯಾಕ್ಸಿನ್ ಮಿಕ್ಸಿಂಗ್​ಗೆ ಮುಂದಾಗೋ ಲಕ್ಷಣ ದಟ್ಟವಾಗ್ತಿದೆ. ಥೈಲ್ಯಾಂಡ್​​ನಲ್ಲಿ ಕೊರೋನಾ ಕೇಸಸ್​ ಹೆಚ್ಚಾಗ್ತಿರೋ ಈ ಸಂದರ್ಭದಲ್ಲಿ ನಾವು ಬೂಸ್ಟರ್ ಶಾಟ್​ಗಾಗಿ 12 ವಾರ ಕಾಯಕ್ಕಾಗಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಲಸಿಕೆ ಮಿಕ್ಸಿಂಗ್ ಅನಿವಾರ್ಯ ಅಂತ ಸರ್ಕಾರದ ಮುಖ್ಯ ಸಲಹೆಗಾರರು ಹೇಳಿದ್ದಾರೆ. ಅಂದ್ಹಾಗೆ ಚೀನಾದ ಸಿನೋವ್ಯಾಕ್​ ಲಸಿಕೆಯನ್ನ ಮೊದಲ ಡೋಸ್​ ಆಗಿ ಕೊಟ್ಟು, ಆಸ್ಟ್ರಾಝೆನೆಕಾ ಲಸಿಕೆಯನ್ನ ಎರಡನೇ ಡೋಸ್​ ಹಾಕಿ ಹಾಕೋದು ಥೈಲ್ಯಾಂಡ್​ ಪ್ಲಾನ್​. ಇದರಿಂದ ಕೊರೋನಾ ವಿರುದ್ಧ ಹೆಚ್ಚು ರಕ್ಷಣೆ ಸಿಗುತ್ತೆ ಅಂತ ಕೆಲವರ ವಾದ. ಆದ್ರೆ ಅದಕ್ಕೆ ಸಂಬಂಧಿಸಿದ ಅಂಕಿಅಂಶಗಳು ಕಮ್ಮಿ ಪ್ರಮಾಣದಲ್ಲಿದೆ ಅನ್ನೋದು ವಿಶ್ವ ಆರೋಗ್ಯ ಸಂಸ್ಥೆ ವಾದ.

-masthmagaa.com

Contact Us for Advertisement

Leave a Reply