ಕೊರೋನಾ ನಡುವೆ ಒಬಾಮಾ ಬರ್ತ್​ ಡೇ ಪಾರ್ಟಿ! ಪರ-ವಿರೋಧ!

masthmagaa.com:

ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮಾಗೆ ನಾಳೆ 60ನೇ ಹುಟ್ಟುಹಬ್ಬದ ಸಂಭ್ರಮ.. ಹೀಗಾಗಿ ವೀಕೆಂಡ್​​ನಲ್ಲಿ ಮಾರ್ತಾಸ್​ ವೈನ್​ಯಾರ್ಡ್​​ ದ್ವೀಪದಲ್ಲಿ 700 ಜನರಿಗೆ ಒಂದು ಪಾರ್ಟಿ ಅರೇಂಜ್ ಮಾಡಿದ್ಧಾರೆ. ಕೊರೋನಾದ ಎಲ್ಲಾ ರೂಲ್ಸ್​​ಗಳನ್ನು ಪಾಲಿಸಿಯೇ ಪಾರ್ಟಿ ಆಯೋಜಿಸಲಾಗಿದೆ. ಪಾರ್ಟಿಗೆ ಬರೋ ಎಲ್ಲಾ ಗೆಸ್ಟ್​ಗಳು ಲಸಿಕೆ ಹಾಕಿಸಿಕೊಂಡಿರಬೇಕು. ಕೊರೋನಾ ಪರೀಕ್ಷೆ ಮಾಡಿಸಿ ನೆಗೆಟಿವ್ ರಿಪೋರ್ಟ್​ ತಗೊಂಡು ಹೋಗಬೇಕು ಅಂತ ಸೂಚಿಸಲಾಗಿದೆ. ಅದೇ ರೀತಿ ಹೊರಾಂಗಣದಲ್ಲಿ ಪಾರ್ಟಿ ಆಯೋಜಿಸಲಾಗಿದೆ. ಇಷ್ಟೆಲ್ಲಾ ಮಾಡಿದ್ರೂ ಕೂಡ ರಿಪಬ್ಲಿಕನ್ ಪಕ್ಷದವರು ಫುಲ್ ವಿರೋಧ ವ್ಯಕ್ತಪಡಿಸಿದ್ದಾರೆ. ಕೊರೋನಾ ಏರುತ್ತಿರುವ ಹೊತ್ತಲ್ಲಿ ಪಾರ್ಟಿ ಆಯೋಜನೆ ಸರಿಯಲ್ಲ. ಅದೇ ಡೊನಾಲ್ಡ್​ ಟ್ರಂಪ್ ರೀತಿ ಪಾರ್ಟಿ ಆಯೋಜಿಸಿದ್ರೆ, ಇಷ್ಟು ಬೇಜವಾಬ್ದಾರಿಯಿಂದ ವರ್ತಿಸಲು ಹೇಗೆ ಸಾಧ್ಯ.. ಜನರನ್ನ ಕೊಲ್ತಿದ್ದಾರೆ ಅಂತೆಲ್ಲಾ ಡೆಮೋಕ್ರಟಿಕ್ ಪಕ್ಷದವರು ಹೇಳ್ತಿದ್ರು ಅಂತ ಕಿಡಿಕಾರಿದ್ದಾರೆ.

-masthmagaa.com

Contact Us for Advertisement

Leave a Reply