‘ದಿ ಕೇರಳ ಸ್ಟೋರಿ’ ಸಿನಿಮಾ ಬಾಯ್ ಫ್ರೆಂಡ್ ವಿರುದ್ಧ ಪೊಲೀಸ್ ದೂರು ಕೊಟ್ಟ ಮುಂಬೈ ಯುವತಿ!

masthmagaa.com:

ದಿ ಕೇರಳ ಸ್ಟೋರಿ ಸಿನಿಮಾ ದಿನೇ ದಿನೇ ಹೊಸ ರೂಪು ಪಡೆದುಕೋಳ್ತಾ ಇದೆ. ಸದ್ಯ 25 ದಿನಗಳನ್ನ ಪೂರೈಸಿದ ದಿ ಕೇರಳ ಸ್ಟೋರಿ ಚಿತ್ರ ಒಟ್ಟು 225 ಕೋಟಿ ಭರ್ಜರಿ ಕಲೆಕ್ಷನ್‌ ಮಾಡಿದೆ. ಈ ಕೇರಳ ಸ್ಟೋರಿ ಸಿನಿಮಾ ಹಲವಾರು ಜನರಿಗೆ ಮಾದರಿ ಅಥ್ವಾ ಇನ್ಸ್ಪಿರೇಷನ್‌ ಆಗಿದೆ. ಸದ್ಯ ಮುಂಬೈನ ಒಂದು ಹುಡುಗಿ ದಿ ಕೇರಳ ಸ್ಟೋರಿ ಸಿನಿಮಾ ನೋಡಿ ತನ್ನ ಬಾಯ್‌ಫ್ರೆಂಡ್‌ ವಿರುದ್ಧ ಕಂಪ್ಲೇಂಟ್‌ ಮಾಡಿದ್ದಾಳೆ.

ಮುಂಬೈನ ವರ್ಸೋವಾ ಪೊಲೀಸರಿಗೆ ದೂರು ನೀಡಿರುವ ಯುವತಿ ತನಗಾದ ಘಟನೆಯನ್ನ ಮಾಧ್ಯಮದ ಮುಂದೆ ಹೇಳಿದ್ದಾಳೆ. 2020 ರಲ್ಲಿ ಮುಂಬೈನ ಯಶ್ ಮಾಡೆಲಿಂಗ್ ಏಜೆನ್ಸಿಗೆ ಬಿಹಾರ ಮೂಲದ ಯುವತಿ ಜಾಯ್ನ್‌ ಆಗಿದ್ದಳು. ನಂತರ ಆ ಏಜೆನ್ಸಿಯ ಒನರ್‌, ತರಬೇತುದಾರ ತನ್ನನ್ನ ಯಶ್ ಅಂತ ಹೇಳಿ ಪರಿಚಯ ಮಾಡಿಕೊಂಡಿದ್ದ. ಆದರೆ ಅದಾದ ನಾಲ್ಕು ತಿಂಗಳಲ್ಲಿ ಆತನ ನಿಜವಾದ ಹೆಸರು ಯಶ್ ಅಲ್ಲ ತನ್ವೀರ್ ಅಖ್ತರ್ ಅಂತ ಯುವತಿಗೆ ಗೊತ್ತಾಗಿದೆ. ಇವರಿಬ್ಬರು ಒಳ್ಳೆ ಸ್ನೇಹಿತರಾದ ನಂತರ ಹೋಳಿಯ ದಿನ ಯುವತಿಯ ಕೆಲವು ಫೋಟೋಗಳನ್ನ ತನ್ವೀರ್ ತೆಗೆದುಕೊಂಡಿದ್ದನಂತೆ. ಆ ಫೋಟೋಗಳನ್ನ ತೋರಿಸಿ ಬ್ಲಾಕ್​ಮೇಲ್ ಮಾಡೋಕೆ ಶುರು ಮಾಡಿದ್ದ. ಮದುವೆಯಾಗು ಅಂತ ಹಿಂಸೆ ಕೊಡ್ತಾ ಇದ್ದನಂತೆ. ಮದುವೆ ಆಗದೇ ಇದ್ರೆ ಆ ಫೋಟೋಗಳನ್ನ ಕುಟುಂಬದವರಿಗೆ ಕಳಿಸ್ತೀನಿ ಅಂತ ಕೂಡ ಹೆಸರಿಸಿದ್ದಾನಂತೆ. ಒಂದು ಸಲ ಅಂತೂ ನನ್ನನ್ನ ಕೊಲೆ ಮಾಡೋಕೂ ಸಹ ಪ್ರಯತ್ನಿಸಿದ್ದ ಅಂತ ಯುವತಿ ಮಾಧ್ಯಮದ ಮುಂದೆ ಹೇಳಿದ್ದಾರೆ.

ದಿ ಕೇರಳ ಸ್ಟೋರಿ ಸಿನಿಮಾ ನೋಡಿದ ಬಳಿಕ ನನಗೆ ಇವರ ಕುತಂತ್ರದ ಅರಿವಾಯಿತು. ನಾನು ಮಾಡೆಲ್ ಆಗಲು ನಟಿಯಾಗಲು ಇಲ್ಲಿಗೆ ಬಂದಿದ್ದೇನೆ ಬೇರೆ ಉದ್ದೇಶದಿಂದಲ್ಲ. ಆ ಸಿನಿಮಾದಲ್ಲಿ ಆ ಯುವತಿಯರಿಗಾದ ಗತಿ ನನಗೆ ಆಗುವುದು ನನಗೆ ಬೇಕಿಲ್ಲ. ನಾನು ದೂರು ನೀಡುವ ಬಗ್ಗೆ ಅವನಿಗೆ ಹೇಳಿದಾಗ ರಾಂಚಿಯಲ್ಲಿ ನನಗೆ ಎಲ್ಲರೂ ಪರಿಚಿತರೇ, ಪೊಲೀಸರಿಗೆ ಹಣ ಕೊಟ್ಟು ನಾನು ನೋಡಿಕೊಳ್ಳುತ್ತೇನೆ ಅಂತ ಕೂಡ ಅವನು ನನಗೆ ಹೇಳಿದ್ದ. ನಾನು ದೂರು ನೀಡಿದ ಬಳಿಕ ಆತ ವಿಡಿಯೋ ಮೂಲಕ ಕ್ಷಮೆ ಕೇಳಿದ, ಅಫಿಡವಿಟ್ ಮಾಡಿಕೊಟ್ಟ, ಅದಾದ ಮೇಲೂ ಅವನ ಕಾಟ ಕಡಿಮೆ ಆಗಿಲ್ಲ.

ಯುವತಿ ನೀಡಿರುವ ದೂರಿನ ಬಗ್ಗೆ ಮಾತನಾಡಿರುವ ರಾಂಚಿಯ ಎಸ್​​ಪಿ ಕಿಶೋರ್ ಕುಶಾಲ್, ಮೇ 29ರಂದು ಯುವತಿ ಮುಂಬೈನ ವರ್ಸೋವಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅದಾದ ಬಳಿಕ ಮೇ 30ರಂದು ಮುಂಬೈ ಪೊಲೀಸರು ರಾಂಚಿ ಪೊಲೀಸ್ ಠಾಣೆಗೆ ದೂರನ್ನು ವರ್ಗಾವಣೆ ಮಾಡಿದ್ದಾರೆ. ರಾಂಚಿ ಪೊಲೀಸರು ಎಫ್​ಐಆರ್ ದಾಖಲಿಸಿಕೊಂಡಿದ್ದು ತನಿಖೆ ಆರಂಭಿಸಿದ್ದೇವೆ, ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುವುದು ಎಂದಿದ್ದಾರೆ.

-masthmagaa.com

Contact Us for Advertisement

Leave a Reply