ISSನಲ್ಲಿ ಕಳೆದು ಹೋಗಿದ್ದ ಟೊಮ್ಯಾಟೋ ಪತ್ತೆ!

masthmagaa.com:

ಇಂಟರ್‌ನ್ಯಾಷನಲ್‌ ಸ್ಪೇಸ್‌ ಸ್ಟೇಶನ್‌ (ISS) ನಲ್ಲಿ ಕಳೆದ ಎಂಟು ತಿಂಗಳಿಂದ ಕಳೆದು ಹೋಗಿದ್ದ ಟೊಮ್ಯಾಟೊ ಹಣ್ಣೊಂದು ವಿಜ್ಞಾನಿಗಳ ಕೈಗೆ ಸಿಕ್ಕಿದೆ. ಪ್ರಯೋಗ ಒಂದ್ರಲ್ಲಿ ISSನಲ್ಲಿ ಟೊಮ್ಯಾಟೋ ಬೆಳೆಯಲಾಗಿತ್ತು. ಅವುಗಳಲ್ಲಿ ಒಂದು ಟೊಮ್ಯಾಟೋ ಕಾಣೆಯಾಗಿ,‌ ಫ್ರಾಂಕ್‌ ರುಬಿಯೋ ಅನ್ನೋ ನಾಸಾ ಆಸ್ಟ್ರೋನಾಟ್ ಒಬ್ರು ಅದನ್ನ ತಿನ್ಬುಟ್ಟಿದ್ದಾರೆ ಅಂತೇಳಲಾಗ್ತಿತ್ತು. ಆದ್ರೆ ಈಗ ಈ ಟೊಮ್ಯಾಟೊ ವಾಪಸ್‌ ಸಿಕ್ಕಿದೆ. ನಾಸಾ ಈ ಸ್ವಾರಸ್ಯಕರ ಘಟನೆಯನ್ನ ಸ್ಪೇಸ್‌ ಡಾಟ್‌ ಕಾಮ್‌ ವೆಬ್‌ಸೈಟ್‌ನಲ್ಲಿ ಶೇರ್‌ ಮಾಡಿದೆ.

-masthmagaa.com

Contact Us for Advertisement

Leave a Reply