ಇಂಡೋನೆಷ್ಯಾದಲ್ಲಿ ಜಿ20 ದೇಶಗಳ ಶೃಂಗಸಭೆ.! ಭಾರತದ ಮೇಲೆಯೇ ಎಲ್ಲೆರ ಚಿತ್ತ! ಏಕೆ?

masthmagaa.com:

ಆರ್ಥಿಕ ಬಿಕ್ಕಟ್ಟು, ಯುಕ್ರೇನ್‌ ಸಂಘರ್ಷ ಸೇರಿದಂತೆ ಇಡೀ ಜಗತ್ತು ಸಮಸ್ಯೆಗಳ ಸುಳಿಗೆ ಸಿಕ್ಕಾಕೊಂಡಿರೋ ಹೊತ್ತಲ್ಲೇ ಜಗತ್ತಿನ ಪ್ರಮುಖ ರಾಷ್ಟ್ರಗಳು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿವೆ. ಇಂಡೋನೇಷ್ಯಾದ ಬಾಲಿಯಲ್ಲಿ ನಡೀತಿರೋ ಜಿ 20 ರಾಷ್ಟ್ರಗಳ ವಾರ್ಷಿಕ ಶೃಂಗಸಭೆಯಲ್ಲಿ ಭಾಗಿಯಾಗಿವೆ. ಅಮೆರಿಕ, ರಷ್ಯಾ,ಚೀನಾ, ಭಾರತ, ಜಪಾನ್‌, ಜರ್ಮನಿ, ಯುನೈಟೆಡ್‌ ಕಿಂಗ್ಡಮ್‌, ಫ್ರಾನ್ಸ್‌, ಬ್ರೆಜಿಲ್‌, ಕೆನಡಾ, ಸೌತ್‌ ಆಫ್ರಿಕಾ, ಸೌದಿ ಅರೇಬಿಯಾ ಸೇರಿದಂತೆ 19 ದೇಶಗಳು ಒಂದು ಯೂರೋಪಿಯನ್‌ ಯೂನಿಯನ್‌ ದೇಶಗಳ ನಾಯಕರು ಈ ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಇನ್ನು ಎಲ್ಲದಕ್ಕಿಂತ ಹೆಚ್ಚಾಗಿ ಈ ಸಭೆಯಲ್ಲಿ ಭಾರತದ ಭಾಗವಹಿಸುವಿಕೆ ಅತ್ಯಂತ ಮಹತ್ವ ಪಡೆದುಕೊಂಡಿದೆ. ಯಾಕಂದ್ರೆ ಇದೇ ಮೊದಲ ಬಾರಿಗೆ ಭಾರತ ಈ ಜಿ20 ರಾಷ್ಟ್ರಗಳ ಮುಂದಾಳತ್ವವನ್ನ ವಹಿಸ್ತಾ ಇದೆ. ಅಂದ್ರೆ ಅಧ್ಯಕ್ಷತೆ ವಹಿಸಿಕೊಳ್ತಿದೆ. ಈ ವರ್ಷದ ಡಿಸೆಂಬರ್‌ನಿಂದ ಭಾರತ ಅಧಿಕೃತವಾಗಿ ಈ ಗುಂಪಿನ ಅಧ್ಯಕ್ಷತೆಯನ್ನ ವಹಿಸ್ತಿದ್ದು ಅಧಿಕಾರ ಹಸ್ತಾಂತರ ಈಗಲೇ ಆಗುತ್ತೆ. ಭಾರತ ಮುಂದಿನ ವರ್ಷ ಅಂದ್ರೆ 2023ರ ನೆವೆಂಬರ್‌ಗೆ ಈ ಶೃಂಗಸಭೆಯನ್ನ ಇಲ್ಲೇ ಆಯೋಜನೆ ಮಾಡಲಿದೆ. ಹೀಗಾಗಿ ಎಲ್ಲರ ಚಿತ್ತ ಭಾರತದತ್ತ ನೆಟ್ಟಿದೆ. ಅಂದ್ಹಾಗೆ ಈ ಜಿ20 ಅನ್ನೋದು ವಿಶ್ವದ ಬಲಿಷ್ಠ ಆರ್ಥಿಕ ಒಕ್ಕೂಟವಾಗಿದ್ದು ಇಡೀ ಜಗತ್ತು ಈ ಗುಂಪಿನ ಕಂಟ್ರೋಲ್‌ನಲ್ಲಿದೆ ಅಂತ ಹೇಳಿದ್ರೆ ತಪ್ಪಾಗಲ್ಲ. ಜಗತ್ತಿನ ಮುಂದುವರಿದ ಮತ್ತು ಉದಯೋನ್ಮುಖ ಆರ್ಥಿಕತೆಗಳು ಇದರ ಪಾಲುದಾರರಾಗಿದ್ದು ಜಾಗತಿಕ GDP ಯ ಸುಮಾರು 85% ರಷ್ಟನ್ನ ಪ್ರತಿನಿಧಿಸ್ತವೆ, ಜಾಗತಿಕ ವ್ಯಾಪಾರದ 75% ಕ್ಕಿಂತ ಹೆಚ್ಚು ಮತ್ತು ವಿಶ್ವದ ಒಟ್ಟು ಜನಸಂಖ್ಯೆಯ ಸರಿಸುಮಾರು ಮೂರನೇ ಎರಡರಷ್ಟು ಪಾಲನ್ನ ಈ ಜಿ ಗುಂಪು ಹೊಂದಿದೆ.

-masthmagaa.com

Contact Us for Advertisement

Leave a Reply