ಲವ್ ಮಾಕ್ಟೇಲ್ 2 ಬಿಡುಗಡೆ ದಿನಾಂಕ ಘೋಷಿಸಿದ ಡಾರ್ಲಿಂಗ್ ಕೃಷ್ಣ!

masthmagaa.com:

ಬಹಳ ನಿರೀಕ್ಷೆ ಹುಟ್ಟುಹಾಕಿರುವ ಲವ್ ಮಾಕ್ಟೇಲ್ ಸಿನಿಮಾದ ಸೀಕ್ವೆಲ್ ನ ಬಿಡುಗಡೆ ದಿನಾಂಕ ಕೊನೆಗೂ ಘೋಷಣೆಯಾಗಿದೆ. ಈ ಬಗ್ಗೆ ನಟ ಮತ್ತು ನಿರ್ದೇಶಕ ಡಾರ್ಲಿಂಗ್ ಕೃಷ್ಣ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಈ ಹಿಂದೆ 2019 ರಲ್ಲಿ ತೆರೆಕಂಡಿದ್ದ ಲವ್ ಮಾಕ್ಟೇಲ್ ಸಿನಿಮಾ ಪ್ರೇಕ್ಷಕರ ಮನಸೂರೆಗೊಂಡು ಬಾಕ್ಸಾಫೀಸಿನಲ್ಲಿ ಹಿಟ್ ಆಗಿ ಓಟಿಟಿ ಯಲ್ಲೂ ಕೂಡ ಭಾರಿ ಸದ್ದು ಮಾಡಿತ್ತು.

ಲವ್ ಮಾಕ್ಟೇಲ್ ಸಿನಿಮಾ ಮೂಲಕ ನಟ ಡಾರ್ಲಿಂಗ್ ಕೃಷ್ಣ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದ್ದರು ನಂತ್ರ ಇದೆ ಸಿನಿಮಾ ತೆಲುಗಿಗೆ ರೀಮೇಕ್ ಕೂಡ ಆಯಿತು. ಸತ್ಯದೇವ್ ಮತ್ತು ತಮನ್ನಾ ಭಾಟಿಯಾ, ಕನ್ನಡದಲ್ಲಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನ ನಿರ್ವಹಿಸಿದ್ದ ಪಾತ್ರಗಳಲ್ಲಿ ತೆಲುಗಿನಲ್ಲಿ ಕಾಣಿಸಿಕೊಂಡಿದ್ದರು.
ಲವ್ ಮಾಕ್ಟೇಲ್ 2 ಸಿನಿಮಾವನ್ನು ಕೃಷ್ಣ ಮತ್ತು ಮಿಲನಾ ನಾಗರಾಜ್ ಅವರು ನಿರ್ಮಿಸಿದ್ದು, ಮುಖ್ಯ ಪಾತ್ರದಲ್ಲಿ ಕೃಷ್ಣ ಅವರಿಗೆ ನಟಿ ರೇಚೆಲ್ ಡೇವಿಡ್ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾ 2022ರ ಫೆಬ್ರವರಿ 11 ನೇ ತಾರೀಕು ಬಿಡುಗಡೆ ಆಗಲಿದೆ.
-masthmagaa.com

Contact Us for Advertisement

Leave a Reply