ಅಫ್ಘನ್‌ ಯೋಧರನ್ನ ಕೈಬಿಡ್ತಾ ಅಮೆರಿಕ?

masthmagaa.com:

ತಾಲಿಬಾನ್ ಟೇಕೋವರ್ ಟೈಮಲ್ಲಿ ಅಪ್ಘಾನಿಸ್ತಾನದಿಂದ ಸಾವಿರಾರು ಸಂಖ್ಯೆಯಲ್ಲಿ ಅಫ್ಘನ್ ಯೋಧರು ಉಜ್ಬೇಕಿಸ್ತಾನಕ್ಕೆ ಓಡಿಹೋದ್ರೆ, ಇನ್ನು ಕೆಲವರು ಪೈಲಟ್​​ಗಳು ಯುದ್ಧ ವಿಮಾನದ ಜೊತೆಗೇ ಉಜ್ಬೇಕಿಸ್ತಾನಕ್ಕೆ ಹಾರಿದ್ರು. ಆದ್ರೀಗ ಅವರೆಲ್ಲರೂ ಹೊಸ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಯಾಕಂದ್ರೆ ಉಜ್ಬೇಕಿಸ್ತಾನ ಅವರೆಲ್ಲರನ್ನೂ ಅಫ್ಘಾನಿಸ್ತಾನಕ್ಕೆ ವಾಪಸ್ ಕಳುಹಿಸುತ್ತೆ ಅನ್ನೋ ಭೀತಿ ಅವರನ್ನು ಕಾಡ್ತಿದೆ. ಹೀಗಾಗಿ ಅಮೆರಿಕ ನಮ್ಮನ್ನು ಇಲ್ಲಿಂದಲೇ ಸ್ಥಳಾಂತರ ಮಾಡುತ್ತೆ ಅನ್ನೋ ನಂಬಿಕೆಯಲ್ಲಿ ಕಾಯ್ತಿದ್ದಾರೆ. ಇವರ ಪೈಕಿ ಹೆಸರು ಹೇಳಲು ಇಚ್ಛಿಸದ ಓರ್ವ ಪೈಲಟ್ ಮಾತನಾಡಿ, ಒಂದು ವೇಳೆ ನಮ್ಮನ್ನು ಅಫ್ಘಾನಿಸ್ತಾನಕ್ಕೆ ಕಳುಹಿಸಿದ್ರೆ, 100 ಪರ್ಸೆಂಟ್ ತಾಲಿಬಾನಿಗಳು ನಮ್ಮನ್ನು ಕೊಲ್ತಾರೆ. ನಾವೆಲ್ಲರೂ ಇಲ್ಲಿ ತುಂಬಾ ಕಷ್ಟದಲ್ಲಿದ್ದೀವಿ. ಜೈಲಿನಲ್ಲಿ ಇದೀವಿ ಅನ್ನೋ ಫೀಲ್ ಆಗ್ತಿದೆ. ಜಾಸ್ತಿ ಓಡಾಡಂಗಿಲ್ಲ. ಬಿಸಿಲಿನಲ್ಲೇ ಇರಬೇಕು. ಆಹಾರ ಮತ್ತು ಔಷಧೀಯ ವ್ಯವಸ್ಥೆ ಇಲ್ಲ. ನಮ್ಮಲ್ಲಿ ಹಲವರ ತೂಕ ಇಳಿಕೆಯಾಗಿದೆ. ಈ ಕ್ಯಾಂಪ್​ನಲ್ಲಿ ನಾವು 465 ಮಂದಿ ಇದೀವಿ. ನಮಗೆ ಯಾವುದೇ ಸ್ವಾತಂತ್ರ್ಯವಿಲ್ಲ.. ಕೈದಿಗಳ ರೀತಿಯಲ್ಲಿ ನಮ್ಮನ್ನು ನಡೆಸಿಕೊಳ್ಳಲಾಗ್ತಿದೆ ಅಂತ ಹೇಳಿದ್ದಾರೆ. ಇನ್ನು ಅಮೆರಿಕದಲ್ಲೂ ಈ ಬಗ್ಗೆ ಚರ್ಚೆಯಾಗ್ತಿದೆ. ಬೈಡೆನ್ ಸರ್ಕಾರ ಉಜ್ಬೇಕಿಸ್ತಾನದಲ್ಲಿ ಸಿಲುಕಿರೋ ಅಫ್ಘನ್ ಸಿಬ್ಬಂದಿ ಮತ್ತು ಯುದ್ಧವಿಮಾನಗಳನ್ನು ಸ್ಥಳಾಂತರಿಸುವಲ್ಲಿ ವಿಫಲವಾಗಿದೆ ಅನ್ನೋ ಟೀಕೆ ಕೇಳಿ ಬರ್ತಿದೆ. ಜೊತೆಗೆ ಇತ್ತೀಚೆಗಷ್ಟೇ ತಾಲಿಬಾನಿಗಳು ಅಕ್ಕಪಕ್ಕದ ದೇಶಗಳಿಗೆ ಪಲಾಯನ ಮಾಡಿರೋ ಯೋಧರು ಮತ್ತು ಯುದ್ಧ ವಿಮಾನಗಳನ್ನು ಹಸ್ತಾಂತರ ಮಾಡುವಂತೆ ತಿಳಿಸಿದ್ರು. ಹೀಗಾಗಿ ಉಜ್ಬೇಕಿಸ್ತಾನ ತಾಲಿಬಾನಿಗಳ ಒತ್ತಡಕ್ಕೆ ಒಳಗಾಗಿದ್ದಾರೆ ಅನ್ನೋ ಮಾತುಗಳು ಕೂಡ ಕೇಳಿ ಬರ್ತಿದೆ.

-masthmagaa.com

Contact Us for Advertisement

Leave a Reply