ನಮಗೆ ಬೇಕಾದಂತೆ ಎಲ್ಲಾ ಸಮಯದಲ್ಲೂ ನಡಿಯೋಲ್ಲ: ನಟಿ ಸಮಂತಾ ಭಾವುಕ ನುಡಿ!

masthmagaa.com:

ಸದ್ಯ ಆರೋಗ್ಯ ವಿಚಾರದಲ್ಲಿ ಚೇತರಿಕೆ ಕಂಡ ಸಮಂತಾ ಮತ್ತೆ ಸಿನಿಮಾಗಳಲ್ಲಿ ಬ್ಯುಸಿ ಆಗ್ತಾ ಇದಾರೆ. ಈ ಹಿಂದೆ ಹಲವು ದೇವಸ್ಥಾನಗಳಿಗೆ ಭೇಟಿ ಕೊಡ್ತಾ ಇದ್ದಂತ ನಟಿ ಈ ಬಾರಿ ಚರ್ಚ್‌ಗೆ ಭೇಟಿ ಕೊಟ್ಟಿದ್ದಾರೆ. ಚರ್ಚ್‌ನಲ್ಲಿ ಎರಡು ಕ್ಯಾಂಡಲ್‌ನ್ನ ಉರಿಸಿ ಭಕ್ತಿಯಿಂದ ಪ್ರಾರ್ಥನೆ ಮಾಡಿದ್ದಾರೆ. ಚರ್ಚ್‌ಗೆ ಹೋದ ಕೆಲವೊಂದು ಫೋಟೋಗಳನ್ನ ತಮ್ಮ ಸೋಷಿಯಲ್‌ ಮೀಡಿಯಾ ಅಕೌಂಟ್‌ನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

ಸಮಂತಾ ರುತ್ ಪ್ರಭು ಚರ್ಚ್‌ ಆಫ್ ಸೈಂಟ್ ಸಾವಾಗೆ ಭೇಟಿ ಕೊಟ್ಟಿದ್ದಾರೆ. ಅಲ್ಲಿದ್ದ ಫೋಟೋಗಳನ್ನು ಇನ್​ಸ್ಟಾಗ್ರಾಮ್​ನಲ್ಲಿ ಶೇರ್ ಮಾಡಿದ್ದಾರೆ. ನನಗೆ ಚಿಕಿತ್ಸೆಯಾಗಿ ಒಂದು ವರ್ಷವಾಗಿದೆ ಅಂತ ಒಂದಿಷ್ಟು ಲೈನ್‌ ಬರೆದು ಕ್ಯಾಪ್ಶನ್‌ ಕೂಡ ಕೊಟ್ಟಿದ್ದಾರೆ.
“ಈ ನ್ಯೂ ನಾರ್ಮಲ್​ಗೆ ಬದಲಾಗಿ ಒಂದು ವರ್ಷ ಆಯ್ತು. ನನ್ನ ದೇಹದೊಂದಿಗೆ ಹಲವಾರು ಸಲ ಫೈಟ್ ಮಾಡಿದ್ದೇನೆ. ಉಪ್ಪಿಲ್ಲ, ಸಿಹಿ ಇಲ್ಲ, ಧಾನ್ಯಗಳಿರುವ ಕಾಕ್ಟೇಲ್ ಇಲ್ಲ. ಎಲ್ಲವನ್ನೂ ಬಲವಂತವಾಗಿ ಬಿಡಬೇಕಾಯಿತು. ಈ ಒಂದು ವರ್ಷ ಅರ್ಥಪೂರ್ಣ. ಅಂತರ್ಯದ ಪ್ರತಿಫಲನ. ಪ್ರೊಫೆಷನಲ್ ಸೋಲು ಕೂಡಾ ಇತ್ತು. ವರ್ಷವನ್ನು ಇನ್ನಷ್ಟು ಆಸಕ್ತಿದಾಯಕವಾಗಿ ಮಾಡಲು ಪೂಜೆಗಳು ಹಾಗೂ ಪ್ರಾರ್ಥನೆಗಳು. ಗಿಫ್ಟ್​ಗಾಗಿ ಪ್ರಾರ್ಥನೆಮಾಡ್ತಾ ಇಲ್ಲ, ಮತ್ತಷ್ಟು ಶಕ್ತಿಗಾಗಿ ಹಾಗೂ ಶಾಂತಿಗಾಗಿ ಪ್ರಾರ್ಥನೆ ಮಾಡ್ತಾ ಇದೀನಿ. ನಿಮಗೆ ಬೇಕಾದಂತೆ ಎಲ್ಲಾ ಸಮಯದಲ್ಲಿ ಎಲ್ಲವೂ ನಡೆಯೋದಿಲ್ಲ ಅಂತ ನನಗೆ ತೋರಿಸಿಕೊಟ್ಟ ವರ್ಷ, ಹಾಗಾಗದಿದ್ದರೂ ಪರವಾಗಿಲ್ಲ ಎಂದು ತಿಳಿಸಿಕೊಟ್ಟ ವರ್ಷ. ನನಗೆ ಕಂಟ್ರೋಲ್ ಮಾಡಲು ಸಾಧ್ಯವಾಗುವುದನ್ನಷ್ಟೇ ಕಂಟ್ರೋಲ್ ಮಾಡಿ ಉಳಿದ ವಿಚಾರಗಳನ್ನು ಅವುಗಳ ಪಾಡಿಗೆ ಹೋಗಲು ಬಿಡಲು ಕಲಿಸಿದ ವರ್ಷ. ಬಹಳಷ್ಟು ಕಷ್ಟಪಟ್ಟು ಹೋರಾಡುತ್ತಿರುವ ಬಹಳಷ್ಟು ಜನರಿರಬಹುದು. ಅವರಿಗಾಗಿ ಪ್ರಾರ್ಥಿಸುತ್ತೇನೆ. ದೇವರು ಸ್ವಲ್ಪ ತಡ ಮಾಡಬಹುದು, ಆದ್ರೆ ನೀಡದೇ ಇರಲಾರ. ದೇವರು ಎಂದೂ ಶಾಂತಿ, ನೆಮ್ಮದಿ, ಪ್ರೀತಿ, ಖುಷಿ, ಶಕ್ತಿಯನ್ನು ನಿರಾಕರಿಸುವುದಿಲ್ಲ” ಅಂತ ಬರೆದಿದ್ದಾರೆ.

-masthmagaa.com

Contact Us for Advertisement

Leave a Reply